

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತ- ಚೀನಾ(India-China) ಸಂಬಂಧಗಳು ಸುಧಾರಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಂಗಳವಾರ(ಡಿ.03) ಲೋಕಸಭೆಗೆ ತಿಳಿಸಿದರು.
2020ರಿಂದ ಚೀನಾ ಕ್ರಮಗಳಿಂದಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗಿತ್ತು. ಇದರಿಂದ ಸಹಜವಾಗಿ ಎರಡು ದೇಶಗಳ ಮಧ್ಯೆ ಸಂಬಂಧ ಹದಗೆಟ್ಟಿತ್ತು. ಆದರೆ, ಇತ್ತೀಚಿನ ಮಿಲಿಟಿರಿ ರಾಜತಾಂತ್ರಿಕ ಮಾತುಕತೆಗಳು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಗಡಿ ಉದ್ದಕ್ಕೂ ಇರುವ ಪ್ರದೇಶಗಳ ಗಡಿ ಒಪ್ಪಂದಂತೆ ಗಡಿ ಸಮಸ್ಯೆಗಳನ್ನು ಪರಿಹರಿಸಿವೆ ಎಂದು ಸದದನಕ್ಕೆ ವಿವರಿಸಿದರು.
''ಕೋವಿಡ್ನಂತಹ ಸಾಂಕ್ರಮಿಕ ರೋಗದ ಪ್ರರಿಸ್ಥಿತಿಯಲ್ಲಿ ನಮ್ಮ ಸೇನಾಪಡೆಯು ಚೀನಾದ ಸೈನ್ಯವನ್ನು ಧೈರ್ಯದಿಂದ ಎದುರಿದರು ಎಂದು ಸೈನಿಕರನ್ನು ಶ್ಲಾಘೀಸಿದರು''
ಇನ್ನು ರಾಜತಾಂತ್ರಿಕ ಮಾತುಕತೆಗಳಿಂದ ಭಾರತ-ಚೀನಾ ದೇಶಗಳ ಸಂಬಂಧ ಸುಧಾರಿಸುತ್ತಿದೆ. ಮುಂದಿನ ದಿನಗಳಲ್ಲಿ ಗಡಿ ಉದ್ದಕ್ಕೂ ನ್ಯಾಯಯುತ ಮತ್ತು ಪರಸ್ಪರ ಸ್ವೀಕಾರಾರ್ಹ ಚೌಕಟ್ಟನ್ನು ಸ್ಥಾಪಿಸಲು ನಮ್ಮ ಸರ್ಕಾರ ಬದ್ಧ ಎಂದು ಅವರು ಹೇಳಿದರು.
ಗಡಿ ಪ್ರದೇಶಗಳಲ್ಲಿ ಚಟುವಟಿಗಳ ಉಲ್ಬಣ ಮತ್ತು ಪರಿಣಾಕಾರಿ ನಿರ್ವಹಣೆ ಬಗ್ಗೆ ನಾವು ಚರ್ಚಿಸಿದ್ದೇವೆ. ಈ ಹಿಂದೆ ಗಡಿಯಲ್ಲಿ ನಿರಂತರ ಉದ್ವಿಗ್ನತೆ ಇತ್ತು. ಇಂದು ಅ ಪರಿಸ್ಥಿತಿ ಇಲ್ಲ. ಗಡಿ ಪ್ರದೇಶಗಳಲ್ಲಿ ಇತ್ತೀಚಿನ ಬೆಳವಣಿಗೆಯಿಂದಾಗಿ ಚೀನಾದೊಂದಿಗಿನ ನಮ್ಮ ಸಂಬಂಧ ಪ್ರತಿಕೂಲ ಪರಿಣಾಮ ಬೀರುತ್ತದೆ. ಮುಂದಿನ ಆದ್ಯತೆಯೂ LAC ಗಡಿಯ ಉದ್ದಕ್ಕೂ ಭದ್ರತೆ ಮತ್ತು ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹಾರ ಮಾಡಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್).