ಬಾಬರ್​ ಅಜಮ್​, ಶಾಹೀನ್​ ಆಫ್ರಿದಿ, ರಿಜ್ವಾನ್ ಇನ್​ಸ್ಟಾಗ್ರಾಮ್​ ಖಾತೆ ನಿರ್ಬಂಧಿಸಿದ​ ಭಾರತ | Blocks Instagram

dk - 2025-05-02T192141.673
Published on

Blocks Instagram : ಪಹಲ್ಗಾಮ್​ ಭಯೋತ್ಪಾದಕ ದಾಳಿ ಭಾತರ ಸರ್ಕಾರ ಪಾಕಿಸ್ತಾನ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇದರ ಭಾಗವಾಗಿ ಇದೀಗ ಪಾಕಿಸ್ತಾನ ಕ್ರಿಕೆಟ್​ ಆಟಗಾರರ ಇನ್​ಸ್ಟಾಗ್ರಾಮ್​ ಖಾತೆಗಳನ್ನು ಶುಕ್ರವಾರ ನಿರ್ಬಂಧಿಸಿಲಾಗಿದೆ.

ಬಾಬರ್​ ಅಜಮ್​, ಶಾಹಿನ್​ ಆಫ್ರಿದಿ ಹಾಗೂ ಮೊಹ್ಮಮದ್​ ರಿಜ್ವಾನ್ ಸೇರಿದಂತೆ ಪಾಕಿಸ್ತಾನದ ಹಲವು ತಾರೆಯರ ಸಾಮಾಜಿಕ ಜಾಲತಾಣದಗಳ ಖಾತೆಗಳನ್ನು ಬಂದ್​ ಮಾಡಲಾಗಿದೆ ಎಂದು ವರದಿಯಾಗಿದೆ.

ಇನ್ನು ಒಂದು ದಿನ ಮುಂಚಿತವಾಗಿ ಅಂದರೆ ಗುರುವಾರದಂದು, ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಸಹ ಭಾರತದಲ್ಲಿ ನಿರ್ಬಂಧಿಸಲಾಗಿದೆ.

ಅವರ ಪ್ರೊಫೈಲ್‌ಗೆ ಭೇಟಿ ನೀಡಲು ಪ್ರಯತ್ನಿಸುವ ಬಳಕೆದಾರರಿಗೆ "ಭಾರತದಲ್ಲಿ ಖಾತೆ ಲಭ್ಯವಿಲ್ಲ. ಈ ವಿಷಯವನ್ನು ನಿರ್ಬಂಧಿಸುವ ಕಾನೂನು ವಿನಂತಿಯನ್ನು ನಾವು ಪಾಲಿಸಿದ್ದೇವೆ ಎಂಬುದು ಇದಕ್ಕೆ ಕಾರಣ" ಎಂಬ ಸಂದೇಶವನ್ನು ತೋರಿಸಲಾಗುತ್ತದೆ.

ಇದೇ ಏ.22ರಂದು ಜಮ್ಮು- ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ವಿದೇಶಿಯರು ಸೇರಿ ಭಾರತದ 26 ಜನ ಪ್ರವಾಸಿಗರು ಬಲಿಯಾಗಿದ್ದರು. ಇದೀಗ, ಈ ಪ್ರಕರಣವೇ ಎರಡು ದೇಶಗಳ ಮಧ್ಯೆ ಉದ್ವಿಘ್ನತೆ ಉಂಟಾಗಿದ್ದು, ಯುದ್ದದ ಕಾರ್ಮೋಡ ಕವಿದಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net