ಅಣ್ವಸ್ತ್ರ ದಾಸ್ತಾನು ಚೀನಾ ಪಾಕ್​ ಮುಂದೆ

Missile
Published on

ನವದೆಹಲಿ: ನೆರೆ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಗಳಿಂದ ಎದುರಾಗಬಹುದಾದ ಸಮರ ಸನ್ನಿವೇಶ ಎದುರಿಸುವುದಕ್ಕೆ ಭಾರತ ಯುದ್ಧತಂತ್ರಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದೆ. ಅಗ್ನಿ ಸರಣಿಯ ಪಣಿಗಳನ್ನು ಸೇನೆಗೆ ಸೇರಿಸುತ್ತ ಬಂದಿದೆ. ರೇಲ್​ ಯುದ್ಧ ವಿಮಾನ, ಜಲಾಂತರ್ಗಾಮಿ ಸೇರ್ಪಡೆಗಳು ನಡೆದಿವೆ. ಆದಾಗ್ಯೂ, ಅಣು ಸಿಡಿತಲೆ ಸಂಗ್ರಹ ಮತ್ತು ದಾಸ್ತಾನಿನ ವಿಚಾರದಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ಭಾರತಕ್ಕಿಂತ ಮುಂದಿವೆ.

ಈ ವರ್ಷದ ಜನವರಿಯ ಲೆಕ್ಕಾಚಾರ ಪ್ರಕಾರ, ಚೀನಾ 350 ಅಣು ಸಿಡಿತಲೆ ಹೊಂದಿದ್ದರೆ, ಪಾಕಿಸ್ತಾನ 165 ಸಿಡಿತಲೆ ಹೊಂದಿದೆ. ಭಾರತದ ಬಳಿ 156 ಅಣು ಸಿಡಿತಲೆ ಇದೆ. ಅಣ್ವಸ್ತ್ರ ಹೊಂದಿರುವ ಒಂಬತ್ತು ರಾಷ್ಟ್ರಗಳ ಬಳಿ ಅಂದಾಜು 13,080 ಅಣ್ವಸ್ತ್ರಗಳಿವೆ ಎಂದು ಸ್ಟಾಕ್​ಹೋಮ್​ ಇಂಟರ್​ನ್ಯಾಷನಲ್​ ಪೀಸ್​ ಇನ್​ಸ್ಟಿಟ್ಯೂಟ್​ (ಸಿಪ್ರಿ) ಸೋಮವಾರ ಬಿಡುಗಡೆ ಮಾಡಿದ ವರದಿ ಹೇಳಿದೆ.

ಏಷ್ಯಾ ರಾಷ್ಟ್ರಗಳ ಚಟುವಟಿಕೆ ಹೆಚ್ಚು
ಕಳೆದ ವರ್ಷ ಗಲ್ವಾನ್​ ಸಂರ್ಷದ ಬಳಿಕ ಚೀನಾ, ಪಾಕಿಸ್ತಾನ ಮತ್ತು ಭಾರತಗಳು ಅಣ್ವಸ್ತ್ರ ಅಭಿವೃದ್ಧಿ, ಸಂಗ್ರಹ, ದಾಸ್ತಾನಿನ ಕಡೆಗೆ ಹೆಚ್ಚಿನ ಗಮನಹರಿಸಿವೆ. ಚೀನಾ ತನ್ನ ಸೇನಾ ಆಧುನೀಕರಣ ಮತ್ತು ಹೊಸ ಅಣ್ವಸ್ತ್ರ ಅಭಿವೃದ್ಧಿ ಪಡಿಸುವ ಕೆಲಸಕ್ಕೆ ವೇಗ ನೀಡಿದೆ ಎಂಬುದನ್ನು ಆಧ್ಯಯನ ಬೊಟ್ಟು ಮಾಡಿದೆ.

ಚೀನಾ ಏನು ಮಾಡಿದೆ?
1. ಪೂರ್ವ ಲಡಾಖ್​ ವಿರುದ್ಧ ದಿಕ್ಕಿನ ತನ್ನ ಗಡಿ ಭಾಗದಲ್ಲಿ ರಸ್ತೆ ಮೂಲ ಸೌಕರ್ಯ ಹೆಚ್ಚಳ
2. 50,000ದಿಂದ 60,000 ಟ್ರೂಪ್​ಗಳನ್ನು ಗಡಿ ಭಾಗದಲ್ಲಿ ನಿಯೋಜಿಸಿದೆ
3. ವಾಯುಸೇನೆಯನ್ನು ನಿಯೋಜಿಸಿದ್ದು, ವಾಯು ನೆಲೆಯನ್ನು ಭದ್ರಗೊಳಿಸಿದೆ
4. ಚಳಿಗಾಲದಲ್ಲೂ ಸದಾ ಸನ್ನದ್ಧ ಪಿಎಲ್​ಎ ಯೋಧರ ನಿಯೋಜನೆ
5. ವಾಯುಪಡೆಯಿಂದ ಪದೇ ಪದೆ ಅಭ್ಯಾಸ ಕವಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net