

ನವದೆಹಲಿ: ಭಾರತ-ಅರ್ಜೆಂಟೀನಾ ನಡುವೆ ಆಹಾರಗಳ ಹಂಚಿಕೆ ಪ್ರಮಾಣ ಹೆಚ್ಚಿಸುವ ಕುರಿತು ಇಂದು ಭಾರತ ಮತ್ತು ಅರ್ಜೆಂಟೀನಾ ಮಧ್ಯೆ ಪರಸ್ಪರ ಮಹತ್ವವಾದ ಚರ್ಚೆ ನಡೆದಿದೆ.
ಈ ಕುರಿತು ಅರ್ಜೆಂಟೀನಾ ದೇಶದ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ನಿಯೋಗದ ಜೊತೆ ಮಾತುಕತೆ ನಡೆಸಿದ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಜಾಗತಿಕ ಸವಾಲುಗಳನ್ನು ನಿಭಾಯಿಸಲು ಮತ್ತು ಆಹಾರ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸಲು ಎರಡೂ ದೇಶಗಳ ಪರಸ್ಪರ ಸಹಕಾರ ಯಾವ ರೀತಿ ಮುಂದುವರಿಯಬೇಕೆಂಬುದರ ಕುರಿತು ಚರ್ಚಿಸಿದರು.
ಅರ್ಜೆಂಟೀನಾ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ಅವರ ನಿಯೋಗ ಇಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ ಆಹಾರೋತ್ಪಾದನೆ ಬಗ್ಗೆ ಸಮಾಲೋಚನೆ ನಡೆಸಿದೆ.
ಉಭಯ ರಾಷ್ಟ್ರಗಳಲ್ಲೂ ಆಹಾರ ಧಾನ್ಯ, ಖಾದ್ಯ ತೈಲದ ಉತ್ಪಾದನೆ ಮತ್ತು ಪೂರೈಕೆಗೆ ಬೇಕಿರುವ ಅಗತ್ಯ ಸಹಕಾರ ಕುರಿತು ಚರ್ಚಿಸಲಾಯಿತು.
ಜಾಗತಿಕ ಸವಾಲುಗಳನ್ನು ನಿಭಾಯಿಸಲು ಮತ್ತು ಆಹಾರ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸಲು ಭಾರತ - ಅರ್ಜೆಂಟೀನಾ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ, ಅಗತ್ಯ ನೆರವಿನ ಬಗ್ಗೆ ಚರ್ಚಿಸಲಾಗಿದೆ ಎಂದು ಸಚಿವ ಜೋಶಿ ಅವರು ಟ್ವೀಟ್ ಮಾಡಿದ್ದಾರೆ.