

Economic Package For Mauritius: ಭಾರತ ಗುರುವಾರ (ಸೆಪ್ಟೆಂಬರ್ 12) ಮಾರಿಷಸ್‌ಗೆ ಸುಮಾರು 680 ಮಿಲಿಯನ್ ಯುಎಸ್‌ಡಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿ, ಕಡಲ ಭದ್ರತೆಯಂತಹ ಹಲವಾರು ನಿರ್ಣಾಯಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಏಳು ಒಪ್ಪಂದಗಳಿಗೆ ಸಹಿ ಹಾಕಿದೆ.
ಮಾರಿಷಸ್‌ನ ಆರ್ಥಿಕ ವಲಯದ ಭದ್ರತೆಯನ್ನು ಬಲಪಡಿಸಲು ಭಾರತ ಸಂಪೂರ್ಣವಾಗಿ ಬದ್ಧವಾಗಿದ್ದು, ಮತ್ತು ಮಾರಿಷಸ್‌ನಲ್ಲಿ ಯುಪಿಐ ಮತ್ತು ರುಪೇ ಕಾರ್ಡ್‌ಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ ನಂತರ ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಸಕ್ರಿಯಗೊಳಿಸಲು ಎರಡೂ ಕಡೆಯವರು ಕೆಲಸ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ, ಬಂದರು, ವಿಮಾನ ನಿಲ್ದಾಣ ಮತ್ತು ರಸ್ತೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಬಲಪಡಿಸುವುದು ಮತ್ತು ಹೊಸ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸುವುದು ಸೇರಿದಂತೆ ಕನಿಷ್ಠ 10 ಯೋಜನೆಗಳನ್ನು ಕಾರ್ಯಗತಗೊಳಿಸಲು ಭಾರತ ಮಾರಿಷಸ್‌ಗೆ ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ. ಮೋದಿ-ರಾಮಗುಲಾಂ ಮಾತುಕತೆಯ ನಂತರ ಹೈಡ್ರೋಗ್ರಫಿ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರ ಅಡಿಯಲ್ಲಿ ಎರಡೂ ಕಡೆಯವರು ಜಂಟಿ ಸಮೀಕ್ಷೆಗಳು, ಸಂಚರಣೆ ಚಾರ್ಟ್‌ಗಳು ಮತ್ತು ಮಾರಿಷಸ್‌ನ ವಿಶೇಷ ಆರ್ಥಿಕ ವಲಯಗಳ ಹೈಡ್ರೋಗ್ರಾಫಿಕ್ ದತ್ತಾಂಶದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಾರೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಈ ಪ್ಯಾಕೇಜ್ ಸಹಾಯವಲ್ಲ. ಭವಿಷ್ಯದಲ್ಲಿ ಹೂಡಿಕೆಯಾಗಿದೆ ಎಂದರು. ಭಾರತ ಮತ್ತು ಮಾರಿಷಸ್ ಎರಡು ರಾಷ್ಟ್ರಗಳಾಗಿರಬಹುದು, ಆದರೆ, ನಮ್ಮ ಕನಸುಗಳು ಮತ್ತು ಗುರಿ ಒಂದೇ ಎಂದು ಹೇಳಿದರು. ಚಾಗೋಸ್ ಒಪ್ಪಂದದ ಮುಕ್ತಾಯಕ್ಕಾಗಿ ರಾಮಗುಲಾಂ ಮತ್ತು ಮಾರಿಷಸ್ ಜನರನ್ನು ಅಭಿನಂದಿಸಿದ ಮೋದಿ, ಇದು ದ್ವೀಪ ರಾಷ್ಟ್ರದ ಸಾರ್ವಭೌಮತ್ವಕ್ಕೆ ಐತಿಹಾಸಿಕ ವಿಜಯ ಎಂದು ಬಣ್ಣಿಸಿದರು.
ಭಾರತವು ಯಾವಾಗಲೂ ವಸಾಹತುಶಾಹಿ ಮುಕ್ತ ಮತ್ತು ಮಾರಿಷಸ್‌ನ ಸಾರ್ವಭೌಮತ್ವದ ಸಂಪೂರ್ಣ ಮಾನ್ಯತೆಯನ್ನು ಬೆಂಬಲಿಸುತ್ತಾ ಬಂದಿದ್ದು, ಈ ವಿಷಯದಲ್ಲಿ ಭಾರತವು ಮಾರಿಷಸ್‌ಗೆ ದೃಢವಾಗಿ ನಿಂತಿದೆ ಎಂದು ಹೇಳಿದರು.(ಏಜೆನ್ಸೀಸ್)