ಸೇನೆ ಹಿಂತೆಗೆಯಬೇಕು: ಉಭಯ ರಾಷ್ಟ್ರಗಳ ಒಮ್ಮತಾಭಿಪ್ರಾಯ

china india
Published on

ನವದೆಹಲಿ: ಲಡಾಖ್​ನ ಪೂರ್ವ ಭಾಗದ ನಾಲ್ಕು ಪ್ರದೇಶಗಳಲ್ಲಿ ಪರಸ್ಪರ ಬಿರುಗಣ್ಣು ಬಿಟ್ಟುಕೊಂಡು ಕೂತಿರುವ ಭಾರತ ಮತ್ತು ಚೀನಾದ ಸೇನೆಯನ್ನು ಹಿಂತೆಗೆಯಬೇಕು ಎಂಬ ವಿಷಯವಾಗಿ ಭಾರತ ಮತ್ತು ಚೀನಾಗಳ ನಡುವೆ ಒಮ್ಮತಾಭಿಪ್ರಾಯ ವ್ಯಕ್ತವಾಗಿದೆ.

ಭಾನುವಾರ ನಡೆದ ಭಾರತ ಮತ್ತು ಚೀನಾದ ಕೋರ್​ ಕಮಾಂಡರ್​ ಮಟ್ಟದ ಸಭೆಯಲ್ಲಿ ಇಂಥ ಒಮ್ಮತಾಭಿಪ್ರಾಯ ಮೂಡಿದ್ದಾಗಿ ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ.

ಇದೀಗ ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ನಿಯೋಜಿಸಿರುವ ಸೇನಾಪಡೆಯನ್ನು ಹಿಂಪಡೆಯುವ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ಮಾತುಕತೆಗಳು ಮುಂದುವರಿಯಲಿವೆ ಎಂದು ಹೇಳಿವೆ.

ಮಾತುಕತೆ ಅತ್ಯಂತ ಸೌಹಾರ್ದಯುತವಾಗಿ, ಸಕಾರಾತ್ಮಕವಾಗಿ ಮತ್ತು ರಚನಾತ್ಮಕವಾಗಿ ನಡೆದಿದ್ದಾಗಿ ತಿಳಿಸಿವೆ.

ಇದೇ ವೇಳೆ, 14 ಕೋರ್​ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಜತೆಗೆ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಲು ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ಈಗಾಗಲೆ ಲಡಾಖ್​ಗೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net