

ದೆಹಲಿ: ಕೇಂದ್ರ ಸರ್ಕಾರವು ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ ಎಂದು ತಿಳಿಸಿದೆ. ಸುಂಕ ದರ(ಟ್ಯಾರಿಫ್ ರೆಟ್) ಕೋಟಾದ ಅಡಿಯಲ್ಲಿ ಈ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ಅನುಮತಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನು ಓದಿ: ಚಿಕನ್ ತಿಂದು ತಗ್ಲಾಕ್ಕೊಂಡ ರಶ್ಮಿಕಾ! ಹಳೆಯ ವಿಡಿಯೋ ಕೆದಕಿ ಕಿರಿಕ್ ಬ್ಯೂಟಿಗೆ ನೆಟ್ಟಿಗರ ತರಾಟೆ
ಕಚ್ಚಾ ಸೋಯಾಬೀನ್ ತೈಲ, ಕಚ್ಚಾ ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವಾಗ ಸಂಪೂರ್ಣ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್(ಎಐಡಿಸಿ) ಸಂಪೂರ್ಣ ತೆರಿಗೆಯಿಂದ ವಿನಾಯಿತಿ ನೀಡುತ್ತದೆ ಎಂದು ಸೂಚಿಸಲಾಗಿದೆ.
ಈ ಸುಂಕ ಮುಕ್ತ ಆಮದುಗಳನ್ನು ಜೂನ್ 30, 2023 ರವರೆಗೆ ಅನುಮತಿಸಲಾಗುತ್ತಿದ್ದು, ಆಮದುದಾರರು 2022-23 ಹಣಕಾಸು ವರ್ಷಕ್ಕನುಗುಣವಾಗಿ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ ಮಂಜೂರು ಮಾಡಿದ ಮಾನ್ಯವಾದ ಸುಂಕ ದರದ ಕೋಟಾ (TRQ) ಅಧಿಕಾರ ಹೊಂದಿರಬೇಕು.(ಏಜೆನ್ಸೀಸ್)