ಅಕ್ರಮ ಮದ್ಯ ಜಪ್ತಿ

Indi-18-2
Published on

ಇಂಡಿ: ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟ ಅಂದಾಜು 8640 ರೂ. ಮೌಲ್ಯದ 25920 ಲೀಟರ್ ಮದ್ಯವನ್ನು ಶುಕ್ರವಾರ ವಶಡಿಸಿಕೊಂಡಿದ್ದಾರೆ.

ಗ್ರಾಮದ ಪಾನಶಾಪ ಅಂಗಡಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಭಾಗಪ್ಪ ಮುತ್ತಪ್ಪ ಪೂಜಾರಿಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಬಕಾರಿ ಉಪನಿರೀಕ್ಷಕಿ ಪರೀನಾ ಖದರಸಾಬ ವನಕ್ಯಾಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಬ್ಬಂದಿ ಸಂಜಯ ಆರ್. ಕುಲಕರ್ಣಿ, ಮಂಜುನಾಥ ಬಡಿಗೇರ, ಶಿವಶಂಕರ ಗೊಟ್ಯಾಳ ದಾಳಿಯಲ್ಲಿ ಪಾಲ್ಗೊಂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net