ನ್ಯೂಯಾರ್ಕ್​ನ ಆಲ್ಬನಿಯಲ್ಲಿ ವಿಭಿನ್ನವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

IDAy1
Published on

| ಬೆಂಕಿ ಬಸಣ್ಣ

ನ್ಯೂಯಾರ್ಕ್​: ನ್ಯೂಯಾರ್ಕ್ ರಾಜ್ಯದ ಅಲ್ಬನಿಯಲ್ಲಿರುವ ಅನಿವಾಸಿ ಭಾರತೀಯರು ಭಾರತದ ಅಮೃತ ಮಹೋತ್ವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು. ಸೋಮವಾರ ಸಂಜೆ ಭಾರತದ ತಿರಂಗ ಧ್ವಜ ಮತ್ತು ಅಮೆರಿಕದ ಧ್ವಜಗಳನ್ನು ಕಟ್ಟಿದ ಬೈಕ್​ಗಳ ಪರೇಡ್ ನಡೆಸಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು

ಇದೇ ವೇಳೆ ಅಲ್ಬನಿ ಹಿಂದೂ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಕೇಸರಿ ಬಿಳಿ ಹಸಿರು ಬಣ್ಣಗಳಿಂದ ಅಲಂಕರಿಸಿ ಭಾರತದ ಧ್ವಜದೊಂದಿಗೆ ಸಿಂಗರಿಸಲಾಗಿತ್ತು.

ವಿಶೇಷ ರಂಗೋಲಿ :

75ನೇ ಅಮೃತ ಮಹೋತ್ಸವದ ಸಲುವಾಗಿ ಇಲ್ಲಿಯ ವಿಶ್ವೇಶ್ ಓಬ್ಲರ ಪತ್ನಿ ಸ್ವರ್ಣಲತಾ ಅವರು ತಮ್ಮ ಮನೆಯ ಮುಂದುಗಡೆ ಭಾರತದ ತಿರಂಗ ಧ್ವಜಗಳ ವಿನ್ಯಾಸದಲ್ಲಿ ರಂಗೋಲಿ ಹಾಕಿ ತಮ್ಮ ಕ್ರಿಯಾಶೀಲತೆಯನ್ನು ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net