ಸಾಲಬಾಧೆಯಿಂದ ಇಬ್ಬರು ಯುವ ರೈತರು ಆತ್ಮಹತ್ಯೆ; ಓರ್ವ ಗ್ರಾಪಂ ಕಟ್ಟಡದಿಂದ ಹಾರಿ, ಮತ್ತೊಬ್ಬ ವಿಷ ಸೇವಿಸಿ ಆತ್ಮಹತ್ಯೆ

Formar Suside
Published on


ಹಾವೇರಿ: ಸಾಲಬಾಧೆಯಿಂದ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ಯುವ ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದ್ದು, ಓರ್ವ ರೈತ ಗ್ರಾಪಂ ಕಟ್ಟಡದ ಮೇಲಿಂದ ಹಾರಿದ್ದರೆ, ಮತೋರ್ವ ವಿಷ ಸೇವಿಸಿ ಮೃತಪಟ್ಟಿದ್ದಾರೆ.
ಬ್ಯಾಡಗಿ ತಾಲೂಕಿನ ಹಿರೇಹಳ್ಳಿಯ ಮಹಾಂತೇಶ ನಿಂಗಪ್ಪ ಅಗಸಿಬಾಗಿಲ (22) ಹಾಗೂ ಸವಣೂರ ತಾಲೂಕಿನ ಹತ್ತಿಮತ್ತೂರ ತಾಂಡಾದ ಅನಿಲ ಮಹಾದೇವಪ್ಪ ಶಿರಬಡಗಿ (21) ಆತ್ಮಹತ್ಯೆಗೆ ಶರಣಾದ ಯುವ ರೈತರು.
ಮಹಾಂತೇಶ ಧರ್ಮಸ್ಥಳ ಸಂಘದಲ್ಲಿ 2.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಬರದಿಂದ ಸರಿಯಾಗಿ ಬೆಳೆ ಬಾರದ ಕಾರಣ ಸಾಲ ತೀರಿಸಲಾಗದೆ ಗ್ರಾಮದ ಗ್ರಾಪಂ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಬ್ಬ ರೈತ ಅನಿಲ ಬ್ಯಾಂಕ್ ಹಾಗೂ ಕೈಗಡವಾಗಿ ಸಾಲ ಮಾಡಿಕೊಂಡಿದ್ದು, ಬೆಳೆ ಬಾರದ ಕಾರಣ ಸಾಲ ತೀರಿಸಲಾಗದೆ ಮನೆಯಲ್ಲಿಯೆ ವಿಷ ಸೇವಿಸಿ ಮೃತಪಟ್ಟಿದ್ದಾನೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net