ಗ್ರಾಮೀಣ ಭಾಗದಲ್ಲಿ ಹೆಚ್ಚಿದ ವಿದ್ಯುತ್ ಸಮಸ್ಯೆ

POWER CUT NEW
Published on

ಬೆಂಗಳೂರು:
ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಅಭಾವ ಸರಿದೂಗಿಸಿಕೊಳ್ಳಲು ಗ್ರಾಮೀಣ ಭಾಗಕ್ಕೆ ತ್ರಿ ೇಸ್ ವಿದ್ಯುತ್‌ಗೆ ಕಡಿತ ಮಾಡಲಾಗುತ್ತಿದೆ.
ಪ್ರತಿ ದಿನ ಸರಾಸರಿ 2 ಸಾವಿರ ಮೆವಾ ವಿದ್ಯುತ್ ಕೊರತೆ ನಿಭಾಯಿಸಲು ಸದ್ಯಕ್ಕೆ ಪರ್ಯಾಯ ದಾರಿಗಳು ಇಲ್ಲದೆ ಇರುವ ಕಾರಣ ಈ ಕ್ರಮ ಇಂಧನ ಇಲಾಖೆಗೆ ಅನಿವಾರ್ಯವಾಗಿದೆ.
ಗೃಹ ಬಳಕೆಗೆ ತೊಂದರೆಯಾಗದಂತೆ ವಿದ್ಯುತ್ ನೀಡಲು ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಿಂಗಲ್ ೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ತ್ರಿ ೇಸ್ ವಿದ್ಯುತ್ ನೀಡಿದರೆ ರೈತರು ಪಂಪ್ ಸೆಟ್ ಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮತ್ತೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಸಿಂಗಲ್ ೇಸ್ ವಿದ್ಯುತ್ ನೀಡುವಂತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಸಿಎಂ ಸಭೆ:
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಇಂಧನ ಇಲಾಖೆ ಪ್ರಗತಿ ಪರಿಶಿಲನಾ ಸಭೆ ಸಿಎಮ ಗೃಹ ಕಚೇರಿಯಲ್ಲಿ ನಡೆಯಲಿದ್ದು, ಹೆಚ್ಚಿರುವ ವಿದ್ಯುತ್ ಬೇಡಿಕೆ ಮತ್ತು ಕೊರತೆ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net