ನಿರಾಳ ತಂದ ಚೇತರಿಕೆ ಪ್ರಮಾಣ ಏರಿಕೆ

Coronavirus
Published on

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಕರೊನಾ ಸೋಂಕು ಪ್ರಕರಣಗಳಿಗೆ ಹೋಲಿಸಿದರೆ ಚೇತರಿಸಿಕೊಂಡವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

ಬುಧವಾರ 5,217 ಸೋಂಕಿತರು ಚೇತರಿಸಿಕೊಳ್ಳುವುದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ 1.39 ಲಕ್ಷಕ್ಕೆ ಏರಿಕೆ ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1.36 ಲಕ್ಷ ಇವೆ. ಹಾಗೆಯೇ ಶೇಕಡವಾರು ಚೇತರಿಕೆ ಪ್ರಮಾಣ 48.99ಕ್ಕೆ ಏರಿಕೆಯಾಗಿರುವುದು ಕೊಂಚ ಸಮಾಧಾನ ಮೂಡಿಸಿದೆ.

ಮತ್ತೊಂದೆಡೆ ಭಾರತದಲ್ಲಿ ಕಳೆದ 24 ತಾಸಿನಲ್ಲಿ 8,323ಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 2.84 ಲಕ್ಷಕ್ಕೆ ಏರಿಕೆಯಾಗಿದೆ. 239 ಸೋಂಕಿತರು ಸಾವನ್ನಪು್ಪವ ಮೂಲಕ ಮೃತರ ಸಂಖ್ಯೆ 7,989ಕ್ಕೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net