ಹೆಚ್ಚಳವಾಯ್ತು ವಿದೇಶಿ ವಿನಿಮಯ ಮೀಸಲು: 2.561 ಶತಕೋಟಿ ಡಾಲರ್ ಏರಿಕೆ

reserve
Published on

ನವದೆಹಲಿ: ಮೇ 10 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 2.561 ಶತಕೋಟಿ ಡಾಲರ್ (21,333​ ಕೋಟಿ ರೂಪಾಯಿ) ಏರಿಕೆಯಾಗಿ 644.151 ಶತಕೋಟಿ ಡಾಲರ್​ಗೆ (53,65,704 ಕೋಟಿ ರೂಪಾಯಿ) ಮುಟ್ಟಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಸತತ ಮೂರು ವಾರಗಳ ಕುಸಿತದ ನಂತರ ಹಿಂದಿನ ವಾರದಲ್ಲಿ ಇದು 3.668 ಶತಕೋಟಿ ಡಾಲರ್ ಏರಿಕೆಯಾಗಿ 641.59 ಶತಕೋಟಿ ಡಾಲರ್​ಗೆ ಮುಟ್ಟಿತ್ತು.

ಏಪ್ರಿಲ್ 5 ಕ್ಕೆ ಕೊನೆಗೊಂಡ ವಾರದಲ್ಲಿ, ವಿದೇಶೀ ವಿನಿಮಯ ಮೀಸಲು 648.562 ಶತಕೋಟಿ ಡಾಲರ್​ಗೆ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು.

ಮೇ 10 ಕ್ಕೆ ಕೊನೆಗೊಂಡ ವಾರದಲ್ಲಿ ಚಿನ್ನದ ಸಂಗ್ರಹವು 1.072 ಶತಕೋಟಿ ಡಾಲರ್​ ಹೆಚ್ಚಳವಾಗಿ 55.952 ಶತಕೋಟಿ ಡಾಲರ್​ಗೆ ಏರಿಕೆಯಾಗಿದೆ. ಇದೇ ವಾರದಲ್ಲಿ ಐಎಂಎಫ್​ ಜತೆ ಭಾರತದ ಮೀಸಲು ಪ್ರಮಾಣವು 4 ದಶಲಕ್ಷ ಡಾಲರ್ ಕಡಿಮೆಯಾಗಿ 4.495 ಶತಕೋಟಿ ಡಾಲರ್​ಗೆ ಇಳಿದಿದೆ ಎಂದು ಕೆಂದ್ರೀಯ ಬ್ಯಾಂಕ್​ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net