

ಸಾಲಿಗ್ರಾಮ: ಸಂಘದ ಎಲ್ಲ ಷೇರುದಾರರ ಶ್ರಮದಿಂದ 2024-25ನೇ ಸಾಲಿನಲ್ಲಿ ತಂದ್ರೆ ಅಂಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘವು 2.50 ಲಕ್ಷ ರೂ. ಆದಾಯ ಗಳಿಸಿದೆ ಎಂದು ಸಂಘದ ಕಾರ್ಯದರ್ಶಿ ರಾಜಶೇಖರ ಮೂರ್ತಿ ತಿಳಿಸಿದರು.
ಸಂಘದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪತ್ರಗಳನ್ನು ಮಂಡಿಸಿ ಮಾತನಾಡಿದ ಅವರು, ತಂದ್ರೆ ಅಂಕನಹಳ್ಳಿ ವ್ಯಾಪ್ತಿಯಲ್ಲಿ ಸೇರುವ ಎಲ್ಲ ಗ್ರಾಮದ ಷೇರುದಾರರು ಸಂಘದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಅವರೆಲ್ಲರ ಸಹಕಾರ ಮತ್ತು ಶ್ರಮದಿಂದ ರೈತರಿಗೆ ಕೊಟ್ಟಿರುವ ಸಾಲವು ಸಕಾಲದಲ್ಲಿ ವಸುಲಾತಿ ಆಗಿದೆ. ಇದರಿಂದ ಶೇ.99 ರಷ್ಟು ಸಾಲ ವಸೂಲಾತಿ ಆಗಿರುವ ಹೆಗ್ಗಳಿಕೆಗೂ ಸಾಕ್ಷಿಯಾಗಿದ್ದು ಇದೇ ರೀತಿ ಎಲ್ಲ ಸದಸ್ಯರು ನಿರ್ದೇಶಕರು ಮತ್ತು ಆಡಳಿತ ಮಂಡಳಿಯವರು ಸಂಘದ ಅಭಿವೃದ್ಧಿಗೆ ಸಹಕಾರ ನೀಡಲಿ ಎಂದು ಮನವಿ ಮಾಡಿದರು.
ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮುದುಗುಪ್ಪೆ ಮಂಜೇಗೌಡ ಮಾತನಾಡಿ, ಕೃಷಿ ಮಾಡುವ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸುವ ರಾಷ್ಟ್ರೀಕೃತ ಬ್ಯಾಂಕುಗಳಿಂಗಿಂತ ಸಹಕಾರ ಸಂಘಗಳ ಮುಂಚೂಣಿಯಲ್ಲಿವೆ. ಹಾಗಾಗಿ ರೈತರು ಸಹಕಾರ ಸಂಘಗಳಲ್ಲಿ ಹಣಕಾಸಿನ ವ್ಯವಹಾರವನ್ನು ಮಾಡಿ ಸಕಾಲದಲ್ಲಿ ಸಾಲ ಸೌಲಭ್ಯವನ್ನು ಪಡೆಯಿರಿ. ಅದೇ ರೀತಿ ಸಾಲ ಮರುಪಾವತಿ ಮಾಡಿ ಎಂದರು.
ತಂದ್ರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶನಾಯಕ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಮಾರ್ಕಂಡೇಗೌಡ, ಚುನಾವಣಾ ಅಧಿಕಾರಿ ಸಹಕಾರ ಇಲಾಖೆಯ ಬಸವರಾಜ್, ಸಂಘದ ಉಪಾಧ್ಯಕ್ಷ ತಂದ್ರೆ ವೆಂಕಟೇಶನಾಯಕ, ನಿರ್ದೇಶಕರಾದ ಯೋಗೇಶ್, ನಟೇಶ್, ಸಂಪತ್‌ಕುಮಾರ್, ಕೆ.ಯೋಗೇಶ್, ಸುಶೀಲಮ್ಮ, ಕುಮಾರ್, ಸರ್ವಮಂಗಳಾ, ಕಾಂತರಾಜನಾಯಕ, ಗೋವಿಂದಯ್ಯ, ಬಸವರಾಜ್, ಗಣೇಶ್, ಸಿಬ್ಬಂದಿ ಮಹೇಶ್, ಮುದುಗುಪ್ಪೆ ಬಾಲು ಸೇರಿದಂತೆ ಇನ್ನಿತರರು ಇದ್ದರು.