

ಬೆಂಗಳೂರು: ನಗರ ಪೊಲೀಸ್ ಇಲಾಖೆಗೆ ಸೋಮವಾರ ಐದು ರಾಯಲ್ ಎನ್‌ಫೀಲ್ಡ್ -೩೫೦ ಕ್ಲಾಸಿಕ್ ಬುಲೆಟ್‌ಗಳನ್ನು ಸೇರ್ಪಡೆ ಮಾಡಲಾಯಿತು.
ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸೋಮವಾರ ಬೈಕ್ ಚಲಾಯಿಸಿ ಪರಿಶೀಲಿಸಿದರು. ಈ ಬೈಕ್‌ಗಳನ್ನು ಗಣ್ಯರ ಭದ್ರತೆ ಹಾಗೂ ಪೊಲೀಸ್ ಭದ್ರತೆಗೆ ಬಳಸಿಕೊಳ್ಳಲಾಗುವುದು. ಅಲ್ಲದೇ ಅನಾಹುತ ನಡೆದ ಸ್ಥಳಕ್ಕೆ ಬೇಗನೆ ತೆರಳಲು ಈ ಬೈಕ್‌ಗಳ ನೆರವಾಗುತ್ತದೆ. ಪ್ರಮುಖವಾಗಿ ಸಮಾರಂಭಕ್ಕೆ ಗಣ್ಯ ವ್ಯಕ್ತಿಗಳನ್ನು ಕರೆತರಲು ಬಳಸಲಾಗುತ್ತದೆ. ಎಂದು ಪೊಲೀಸ್ ಮೂಗಳು ತಿಳಿಸಿವೆ.
ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಗುರುವಾರ ನಡೆಯುವ ಸ್ವಾತಂತ್ರೃ ದಿನಾಚರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಈ ಬೈಕ್‌ಗಳನ್ನು ಇಲಾಖೆಗೆ ಹಸ್ತಾಂತರಿಸಲಿದ್ದಾರೆ ಎಂದು ದಯಾನಂದ ತಿಳಿಸಿದಾರೆ.