

ಬೆಂಗಳೂರು: ಬಿಜೆಪಿಯವರು ಸುಳ್ಳು ಆರೋಪ ಮಾಡಿ ‘ಪೇ ಸಿಎಸ್’ ಅಭಿಯಾನ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ನಾವು ಆರಂಭಿಸಿರುವ ತನಿಖೆ ಮುಗಿದರೆ ಸುಮಾರು ಎಂಟು ಮಾಜಿ ಸಚಿವರು ಜೈಲು ಸೇಡುವುದು ಖಚಿತ. ಬಿಟ್ ಕಾಯಿನ್ ಹಗರಣದಲ್ಲಿ ಮಾಜಿ ಸಿಎಂ ಬೊಮ್ಮಾಯಿ ಕೂಡ ಸಿಲುಕುತ್ತಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲುವರಾಯ ಸ್ವಾಮಿ ಗೆದ್ದು ಮಂತ್ರಿ ಆದಮೇಲೆ ಕೆಲಸ ಮಾಡುತ್ತಿರುವುದನ್ನು ನಿಮ್ಮಿಂದ ಸಹಿಸಲಾಗದೆ ರಾಜ್ಯಪಾಲರಿಗೆ ನಕಲಿ ಪತ್ರ ಬರೆಯುತ್ತೀರಿ. ಇನ್ನೆರಡು ದಿನಗಳಲ್ಲಿ ನಿಜ ಬಯಲಿಗೆ ಬರಲಿದೆ. ತಪ್ಪಿತಸ್ಥರನ್ನು ಒದ್ದು ಒಳಗೆ ಹಾಕುತ್ತೇವೆ ಎಂದರು.
ಈ ಪತ್ರ ನೋಡಿದರೆ ಈ ಪತ್ರ ಯಾರು ಬರೆದಿದ್ದಾರೆ ಎಂಬುದು ಬಯಲಾಗುತ್ತದೆ. ಪತ್ರ ಬರೆದವರ ಹೆಸರು ಸೌಮ್ಯ ಎಂದು ಇದೆ. ಆದರೆ ಸಹಿ ಮಾಡಿರುವುದು ಪ್ರೇಮಾ ಎಂಬ ಹೆಸರಲ್ಲಿ. ಎಂಟು ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಹೇಳಿದ್ದು ಕೇವಲ ಓರ್ವರು ಮಾತ್ರ ಸಹಿ ಹಾಕಿದ್ದಾರೆ. ನಮ್ಮ ರಾಜ್ಯಪಾಲರು ಇದನ್ನು ಗಮನಿಸದೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ತನಿಖೆ ಮಾಡಿ ಎಂದು ಹೇಳಿದ್ದಾರೆ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಅಶೋಕ್ ಹಾಗೂ ಅಶ್ವಥ್ ನಾರಾಯಣ ಅವರು ಗುತ್ತಿಗೆದಾರರ ಪರವಾಗಿ ಮಾತನಾಡುತ್ತಾ ಶೇ.10-15 ಕಮಿಷನ್ ಸುಳ್ಳು ಆರೋಪ ಮಾಡಿದ್ದಾರೆ. ಎಂದು ಆರೋಪಿಸಿದ ಅವರು ಅಶ್ವತ್ ನಾರಾಯಣ ಅವರೇ ನಿಮ್ಮ ತಮ್ಮ ಸೇರಿದಂತೆ ನಿಮ್ಮ ನೆಂಟರು ಬಿಬಿಎಂಪಿ ಹಾಗೂ ಬಿಡಿಎ ನಲ್ಲಿ ಎಷ್ಟು ಕೋಟಿ ಮೊತ್ತದ ಗುತ್ತಿಗೆ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.