ತಮ್ಮನಿಗೆ ಪತ್ನಿಯ ತಂಗಿಯನ್ನು ಮದುವೆ ಮಾಡಿ ಕೊಟ್ಟಿಲ್ಲವೆಂದು ಹೆಂಡತಿಯ ಜೀವ ತೆಗೆದ ಗಂಡ!

Crime News
Published on

ದೇವನಹಳ್ಳಿ: ಗಂಡ ತನ್ನ ಪತ್ನಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಇದಕ್ಕೆ ಕಾರಣ ತನ್ನ ತಮ್ಮನಿಗೆ ಹೆಂಡತಿಯ ತಂಗಿಯನ್ನು ಮದುವೆ ಮಾಡಿಕೊಟ್ಟಿಲ್ಲವೆಂದು. ಹೊಸಕೋಟೆ ತಾಲೂಕಿನ ದಳಸಗೆರೆ ಗ್ರಾಮದ ಪವಿತ್ರ (25) ಮೃತ ಗೃಹಿಣಿ.

ಪವಿತ್ರಾಳನ್ನು ಹತ್ಯೆಗೈದ ನಂತರ ಆಕೆಯ ಮೃತದೇಹವನ್ನು ಗಂಡನ ಮನೆಯವರು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಆರೋಪಿ ಗಂಡ ಮುರಳಿ ಮತ್ತು ಆತನ ಕುಟುಂಬಸ್ಥರು ಕಿರುಕುಳ ನೀಡಿ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಪವಿತ್ರಾಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಗಂಡ ಮುರಳಿ ತನ್ನ ತಮ್ಮನಿಗೆ ಪವಿತ್ರಳಾ ತಂಗಿಯೊಂದಿಗೆ ಮದುವೆ ಮಾಡಿಸುವಂತೆ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಆದರೆ ಮುರಳಿ ತಮ್ಮ ಮಾನಸಿಕವಾಗಿ ಸರಿಯಿಲ್ಲವೆಂದು ಪವಿತ್ರ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದರು. ಬಳಿಕ ಬೇರೆಡೆ ಸಂಬಂಧ ನೋಡಿ ಮಗಳ ಮದುವೆ ಮಾಡಲು ಮುಂದಾಗಿದ್ದರು.

ಇದೀಗ ಕುಟುಂಬಸ್ಥರು ಪವಿತ್ರಾಳ ಮೃತದೇಹವನ್ನು ಗಂಡನ ಮನೆ ಮುಂದಿಟ್ಟು ಆಕ್ರೋಶ ಹೊರಹಾಕಿದ್ದಾರೆ. ಘಟನೆ ಬಗ್ಗೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net