ಪ್ರವಾಸಿತಾಣಗಳ ಸೂಚನಾ ಫಲಕ ಉದ್ಘಾಟನೆ

13SPT5
ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ತಾಲೂಕು ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಪ್ರವಾಸೋದ್ಯಮದ ಸ್ಥಳಗಳ ಸೂಚನಾ ಫಲಕವನ್ನು ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್ ಉದ್ಘಾಟಿಸಿದರು. ನವೀನ್, ಯೋಗೇಶ್, ಅಭಿನಂದ್ ಇದ್ದರು.
Published on

ಸೋಮವಾರಪೇಟೆ : ತಾಲೂಕು ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಪ್ರವಾಸಿ ತಾಣಗಳ ಸೂಚನಾ ಫಲಕವನ್ನು ಹೊಸ ತೋಟ ಜಂಕ್ಷನ್ ಬಳಿ ಗುರುವಾರ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್ ಉದ್ಘಾಟಿಸಿದರು.

ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಹೋಂ ಸ್ಟೇ ಅಸೋಸಿಯೇಷನ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಆಯಾಕಟ್ಟಿನ ಸ್ಥಳಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗುತ್ತಿದೆ. ತಾಲೂಕಿನಾದ್ಯಂತ ಮಾಹಿತಿ ಫಲಕಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು.

ಮಡಿಕೇರಿ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಹಂತಿ ಗಣೇಶ್, ಹೋಂಸ್ಟೇಗೆ ಸಂಬಂಧಪಟ್ಟಂತೆ ಕಾನೂನು ನಿಯಮಗಳು, ನಿಬಂಧನೆಗಳು ಮತ್ತು ಮಾನದಂಡಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಮಡಿಕೇರಿ ಸಮಿತಿ ಉಪಾಧ್ಯಕ್ಷ ನವೀನ್ ಅಂಬೆಕಲ್, ತಾಲೂಕು ಉಪಾಧ್ಯಕ್ಷರಾದ ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದ್ ಹಾಗೂ ಹೋಂ ಸ್ಟೇ ಅಸೋಸಿಯೇಷನ್ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net