ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಿ

24 bk-1
ಬಸವಕಲ್ಯಾಣದಲ್ಲಿ ಕಾರ್ಯನಿರತ ಪತ್ರಕರ್ತರ ತಾಲೂಕು ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಹುಬ್ಬಳಿಯ ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರ ಅವರಿಗೆ ಶಂಕರ ಪ್ರಸಾದ್ ದುಬೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ವಿಜಯಸಿಂಗ್, ರಾಜು ಬಣಕಾರ, ರಮೇಶ ಸುಲ್ಪಿ, ಡಾ.ಭುರಳೆ ಚಂದ್ರಶೇಖರ ದುಬೆ, ಜೋಶಿ, ಉದಯ ಮುಳೆ, ಗುರುನಾಥ ಗಡ್ಡೆ, ಪ್ರಲ್ಹಾದ್ ಡಿ.ಕೆ., ವೀರಶೆಟ್ಟಿ ಮಲಶೆಟ್ಟಿ ಇತರರಿದ್ದರು.
Published on

ಬಸವಕಲ್ಯಾಣ: ಸಮಾಜದಲ್ಲಿ ವಿಶ್ವಾಸರ್ಹತೆ ಮೂಡಿಸುವ ಕೆಲಸ ಪತ್ರಿಕೆಗಳಿಂದ ನಡೆಯಬೇಕು. ಸಮಸ್ಯಾತ್ಮಕ ವಿಷಯಗಳನ್ನು ಗುರುತಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಪತ್ರಕರ್ತರು ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕೆಂದು ಹುಬ್ಬಳಿಯ ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರ ಹೇಳಿದರು.

ನಗರದ ಬಿಕೆಡಿಬಿ ಯಾತ್ರಿ ನಿವಾಸದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಶಂಕರ ಪ್ರಸಾದ್ ದುಬೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಶರಣರ ನೆಲದಲ್ಲಿ ಶಂಕರ ಪ್ರಸಾದ್ ದುಬೆ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಬದುಕಿನ ಮಹತ್ವದ ಘಳಿಗೆ. ಈ ಪ್ರಶಸ್ತಿಯು ನನ್ನಲ್ಲಿ ಬದ್ಧತೆ, ಪ್ರಾಮಾಣಿಕತೆ, ಹೊಣೆಗಾರಿಕೆ ಹೆಚ್ಚಿಸಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ಸಮಾಜದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದು ಮತ್ತು ಜವಾಬ್ದಾಯುತವಾದದ್ದು, ಸಕಾರಾತ್ಮ ಸುದ್ದಿಗಳ ಕಡೆ ಹೆಚ್ಚು ಹೆಚ್ಚು ಗಮನ ಹರಿಸಬೇಕು. ಇದರಿಂದ ಸಮಾಜದಲ್ಲಿ ಗುಣಾತ್ಮಕ ಬೆಳೆವಣಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ನ್ಯಾಯಾಂಗ, ಕಾಯರ್ಾಂಗ, ಶಾಸಕಾಂಗದ ಜತೆಗೆ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಮಾಧ್ಯಮ ರಂಗ ಸಮಾಜದ ಕನ್ನಡಿಯಾಗಿದೆ. ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣವು ಸುದ್ದಿ ವೇಗವಾಗಿ ಬಿತ್ತರಿಸುತ್ತವೆ. ಆದರೆ ಮುದ್ರಣ ಮಾಧ್ಯಮದಲ್ಲಿ ಹೆಚ್ಚು ಪರಿಶೀಲನೆ, ಪರಾಮಶರ್ೆಗಳಾಗಿ ಸುದ್ದಿ ಪ್ರಕಟಗೊಳ್ಳುತ್ತವೆ ಎಂದರು.

ನಗರ ಸಭೆ ಪೌರಾಯುಕ್ತ ರಾಜು ಡಿ.ಬಣಕಾರ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವ ಕೆಲಸ ಪತ್ರಕರ್ತರದ್ದು. ಮಾಧ್ಯಮದವರಿಗೆ ಮೂಲಸೌಕರ್ಯಗಳಾದ ಮನೆ, ನಿವೇಶನ, ಪಿಂಚಣಿ, ಸಂಭಾವನೆ ನೀಡುವ ಕೆಲಸ ಸಕರ್ಾರದ ವತಿಯಿಂದ ಆಗಬೇಕು. ಬಸವಕಲ್ಯಾಣದಲ್ಲಿ ಸಿಎ ನಿವೇಶನದಲ್ಲಿ ಪತ್ರಿಕಾ ಭವನ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಮಾತನಾಡಿ, ಪ್ರಜಾಪ್ರಭುತ್ವದ ಚಲನಶೀಲತೆಗೆ ಪತ್ರಿಕಾರಂಗ ಬೇಕು. ಸಮಾಜದ ಲೋಪದೋಷಗಳನ್ನು ಎತ್ತಿ ತೋರಿಸಿ ಸರಿದೂಗಿಸುವ ಕೆಲಸ ಪತ್ರಿಕೆಗಳಿಂದ ಸಾಧ್ಯವಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್, ಜೆಡಿಎಸ್ ತಾಲೂಕು ಅಧ್ಯಕ್ಷ ಶಬ್ಬಿರ್ ಪಾಶಾ ಮುಜಾವರ್, ಬಿಡಿವಿಸಿ ಉಪಾಧ್ಯಕ್ಷ ಡಾ.ಜಿ.ಎಸ್.ಭುರಾಳೆ, ಪತ್ರಕರ್ತಗುರುನಾಥ ಗಡ್ಡೆ ಮಾತನಾಡಿದರು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಪಿಎಸ್ಐ ಅಂಬರೀಶ ವಾಗ್ಮೂಡೆ, ನಿವೃತ್ತ ಅಭಿಯಂತರ ಚಂದ್ರಕಾಂತ ದುಬೆ ಸೇರಿದಂತೆ ಪ್ರಮುಖರು, ಗಣ್ಯರು, ದುಬೆ ಪರಿವಾರದ ಸದಸ್ಯರು ಇದ್ದರು.

ಸಂಘದ ತಾಲೂಕು ಅಧ್ಯಕ್ಷ ಮಾರ್ತಂಡ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ ಸ್ವಾಗತಿಸಿ, ಪ್ರಶಸ್ತಿ ಪುರಸ್ಕೃತರ ಪರಿಚಯ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಣೆ ಮಾಡಿ ವಂದಿಸಿದರು.

ಸನ್ಮಾನ: ಪತ್ರಕರ್ತರಾದ ಉದಯಕುಮಾರ ಮುಳೆ, ನೈಮೋದ್ದಿನ್ ಚಾಬೂಕ್ ಸವಾರ, ಡಿ.ಕೆ ಪ್ರಲ್ಹಾದ್, ಶಿವಪುತ್ರ ಪಿ.ಪಾಟೀಲ್, ಪ್ರದೀಪ ವಿಸಾಜಿ, ಗುರುನಾಥ ಗಡ್ಡೆ, ವೀರಶೆಟ್ಟಿ ಮಲಶೆಟ್ಟಿ, ರಾಜೇಂದ್ರ ಗೋಖಲೆ, ಕಲ್ಯಾಣರಾವ ಮದರಗಾಂವಕರ, ಸುರ್ಯಕಾಂತ ಮದಕಟ್ಟಿ, ಧನರಾಜ ರಾಜೋಳೆ, ಖುತೊಬೋದ್ದಿನ್, ಸೈಯದ್ ಅಕ್ಬರ್ ಸಾವೂದ್, ಮೊಹಮ್ಮದ್ ಮಿಯ್ಯಾ, ರೌಫ್, ಝಾಕೀರ್, ಪತ್ರಿಕಾ ವಿತರಕರಾದ ಸಂಗ್ರಾಮಪ್ಪ ಪಾಟೀಲ್, ಸಂಜು ಮುದಗಡೆ, ಶೈಲೇಂದ್ರ ಪಾಟೀಲ್, ಜೈಹಿಂದ, ಅಶೋಕ ಸೇರಿ ಮತ್ತಿತರರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಲ್ಲಿಕಾಜರ್ುನ ಖೂಬಾ ಅವರ ವತಿಯಿಂದ ತಾಲೂಕಿನ ಪತ್ರಕರ್ತರನ್ನು ಸನ್ಮಾನಿಸಲಾಯಿತು..

ಪತ್ರಿಕಾ ಭವನಕ್ಕೆ ನಿವೇಶನ ಕಲ್ಪಿಸಲು ಯತ್ನ: ಬಸವಕಲ್ಯಾಣದಲ್ಲಿ ಪತ್ರಿಕಾ ಭವನಕ್ಕೆ ಸರ್ಕಾರದಿಂದ ಶೀಘ್ರದಲ್ಲಿ ನಿವೇಶನವನ್ನು ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಮಾಜಿ ಎಂಎಲ್ಸಿ ವಿಜಯಸಿಂಗ್ ಭರವಸೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣಗಳಿಗೆ, ಅಧಿಕಾರಿಗಳಿಗೆ, ಸಮಾಜಕ್ಕೆ ಎಚ್ಚರಿಸುವ, ಸುಧಾರಿಸುವ ಅಧಿಕಾರ ಮತ್ತು ಜವಾಬ್ದಾರಿ ಎರಡೂ ಮಾಧ್ಯಮಕ್ಕಿದೆ ಎಂದರು.

ಖಡ್ಗಕ್ಕಿಂತಲೂ ಹರಿತವಾದದ್ದು, ಬಲಿಷ್ಠವಾದದ್ದು ಲೇಖನಿ. ಮಾಧ್ಯಮಗಳು ಯಾರಿಗೂ ಕಾಣದ ಸಮಸ್ಯೆ, ಸವಾಲು, ಕುಂದು ಕೊರತೆಗಳ ಕಡೆಗೆ ಬೆಳಕು ಹರಿಸಿ ಪರಿಹಾರ ನೀಡುತ್ತದೆ. ಪತ್ರಕರ್ತರು ಹೆಚ್ಚು ಸಕಾರಾತ್ಮಕ ವರದಿಗಳಿಗೆ ಹೆಚ್ಚು ಒತ್ತು ನೀಡಲಿ. ಪತ್ರಿಕಾ ಮಾಧ್ಯಮದಿಂದ ಸಮಾಜದ ಬೆಳವಣಿಗೆ ಮತ್ತು ಬದಲಾವಣೆ ಸಾಧ್ಯ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net