ಹೊಸ ಅಗ್ರಹಾರದಲ್ಲಿ ಗ್ರಾಪಂ ಕಟ್ಟಡ ಉದ್ಘಾಟನೆ

bherya ph-2
Published on

ಭೇರ್ಯ: ಗ್ರಾಮ ಪಂಚಾಯಿತಿ ಹಣದಲ್ಲಿ ಸ್ವಂತ ಕಟ್ಟಡ ಕಟ್ಟುವ ಮೂಲಕ ಯೋಗೇಶ್ ತಾಲೂಕಿನಲ್ಲೇ ಮಾದರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮೀಪದ ಹೊಸ ಅಗ್ರಹಾರ ಗ್ರಾಮದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಗ್ರಾಮ ಪಂಚಾಯಿತಿ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

50 ವರ್ಷಗಳಿಂದ ಹೆಂಚಿನ ಮನೆಯಲ್ಲಿದ್ದ ಗ್ರಾಪಂ ಕಚೇರಿಯನ್ನು ನಾಲ್ಕು ವರ್ಷದ ಅವಧಿಯಲ್ಲಿ 12 ಸದಸ್ಯರು ಮತ್ತು 11 ಜನ ಸಿಂಬಂದ್ದಿಯನ್ನು ಒಗ್ಗೂಡಿಸಿ ಆರ್‌ಸಿಸಿ ಕಟ್ಟಡ ನಿರ್ಮಿಸಿರುವುದು ಸ್ವಾಗತಾರ್ಹ. ಹೆಚ್ಚಿನ ಕಾಮಗಾರಿಗೆ ಅನುದಾನ ಅಗತ್ಯವಿದ್ದರೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ, ಸೈಟ್‌ಗಳ ಹಂಚಿಕೆ, 5 ದೇವಸ್ಥಾನಗಳ ಹಾಗೂ ರಸ್ತೆಗಳ ಅಭಿವೃದ್ಧಿ, ನಾಲೆ ಶುದ್ಧೀಕರಣ, ಸಿಮೆಂಟ್‌ರಸ್ತೆ, ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯೋಗೇಶ್, ಉಪಾಧ್ಯಕ್ಷೆ ನಾಗಮ್ಮ ರಂಗೇಗೌಡ, ಸದಸ್ಯರಾದ ಪುಷ್ಪಾ ಜಯರಾಮೇಗೌಡ, ಪೂರ್ಣಿಮಾ ಪ್ರಸನ್ನ, ಜಯಮ್ಮ ರಾಜನಾಯಕ, ನಿಂಗಮ್ಮ ಚಂದ್ರೇಗೌಡ, ನೀಲಮ್ಮ ಜಗಶೆಟ್ಟಿ, ಶಂಕರೇಗೌಡ, ಸ್ವಾಮಿಗೌಡ, ಪ್ರಸನ್ನ, ಪಿಡಿಒ ವಿ.ಎ.ಅಶ್ವಿನಿ, ಕರ ವಸೂಲಿಗಾರ ಕುಮಾರ್, ಡಾಟಾ ಎಂಟ್ರಿ ಬಾಲರಾಮ್, ನೀರುಗಂಟಿಗಳಾದ ಚಂದ್ರನಾಯಕ, ಸ್ವಾಮಿಗೌಡ, ರಾಮೇಗೌಡ, ರಮೇಶ್, ಸಂತೋಷ್, ಜಯದೇವ, ಗಣೇಶ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net