ದುಷ್ಟ ಭಾವನೆ ನಾಶಗೊಳಿಸಿ ಸದ್ವಿಚಾರ ಮೈಗೂಡಿಸಿಕೊಳ್ಳಿ

16ark-1
Published on

ಅರಕಲಗೂಡು: ದುಷ್ಟ ಭಾವನೆಗಳನ್ನು ನಾಶಗೊಳಿಸಿ ಸದ್ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಎ. ಮಂಜು ಹೇಳಿದರು.

ಪಟ್ಟಣದ ಗ್ರಾಮದೇವತೆ ಶ್ರೀ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ಸಂಜೆ ಐತಿಹಾಸಿಕ ಅರಕಲಗೂಡು ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿದ್ದು, ದಸರಾ ಹಬ್ಬವನ್ನು ಸರಳವಾಗಿ ಆಚರಿಸುವ ಬಗ್ಗೆ ನಿರ್ಣಯಿಸಿದ್ದೇವೆ. ಆದರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯಾವ ಬರವೂ ಇಲ್ಲ. ಎಲ್ಲರೂ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಅರೆಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದೇವಿಯ ಕೃಪೆ ಬಹುದೊಡ್ಡದು. ಜಗನ್ಮಾತೆಯನ್ನು ಭಕ್ತಿಯಿಂದ ಪೂಜಿಸಿದರೆ, ಸಕಲ ಕಷ್ಟಗಳೂ ನಿವಾರಣೆಯಾಗಲಿವೆ. ಸನಾತನ ಕಾಲದಿಂದ ನಡೆದು ಬಂದಿರುವ ನವರಾತ್ರಿ ಉತ್ಸವವನ್ನು ಎಲ್ಲರೂ ಸೇರಿ ಆಚರಿಸೋಣ ಎಂದರು.

ದಸರಾ ಸಮಿತಿ ಅಧ್ಯಕ್ಷ ಶ್ರೀ ಜಯದೇವ ಸ್ವಾಮೀಜಿ, ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ರಾಮಸ್ವಾಮಿ, ತಹಸೀಲ್ದಾರ್ ಬಸವರಾಜ ರೆಡ್ಡಪ್ಪ ರೋಣದ, ಪ.ಪಂ.ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ, ಸದಸ್ಯರಾದ ಪ್ರದೀಪ್ ಕುಮಾರ್, ಅನಿಕೇತನ್, ಹೂವಣ್ಣ, ಕೃಷ್ಣಯ್ಯ, ಮಾಜಿ ಅಧ್ಯಕ್ಷ ಮಂಜುಶೆಟ್ಟಿಗೌಡ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ ಇತರರಿದ್ದರು.

ಅರಕಲಗೂಡು ದಸರಾ ಅಂಗವಾಗಿ ಸೋಮವಾರ ಮಹಿಳಾ ದಸರಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳೆಯರು ಪ್ರಮುಖ ಬೀದಿಗಳಲ್ಲಿ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಸಿಡಿಪಿಒ ವೆಂಕಟೇಶ್, ತಾಪಂ ಇಒ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net