ಭಯೋತ್ಪಾದನೆಯ ನೆರಳಲ್ಲಿ...

1-681f92961bc9d
Published on
ಸರ್ವೆಜನಃ ಸುಖಿನೋ ಭವಂತು, ಅಸತೋಮ ಸದ್ಗಮಯ ... ಇವೆಲ್ಲ ಭಾರತೀಯ ಸಂಸ್ಕೃತಿಯ ಜನಪ್ರಿಯ ಶ್ಲೋಕಗಳು. ಎಲ್ಲರೂ ಶಾಂತಿ-ಸಮಾಧಾನ, ನೆಮ್ಮದಿ ಮತ್ತು ಸಹಬಾಳ್ವೆಯಿಂದ ಬದುಕಲು ಆಶೀರ್ವದಿಸು ದೇವಾ ಎನ್ನುವುದು ಇದರ ಅರ್ಥ.

ನಮ್ಮ ಸಾಧು ಸಂತರು, ಯೇಸುಕ್ರಿಸ್ತ ನಮಗೆ ಇದನ್ನೇ ಕಲಿಸಿದರು. ವರ್ಷಗಳು ಸಂದವು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಆದಂತೆ, ಮಾನವೀಯ ಮೌಲ್ಯಗಳ, ಸಂಬಂಧಗಳ ಅವನತಿ ಆರಂಭವಾಯಿತು. ನಾವು ಎಂಬುದರ ಬದಲು ನಾನು ಎಂಬ ಚಿಂತನೆ ಬರಲಾರಂಭಿಸಿತು. ಸ್ವಾರ್ಥ ಹಾಗೂ ಅಹಂ ಪ್ರಬಲವಾಯಿತು. ಮಾನವ ದಾನವನಾಗಲು ಆರಂಭಿಸಿದ. ಒಂದು ಸಂಶೋಧನೆ ಹೀಗೆನ್ನುತ್ತದೆ: 17 ನೇ ಶತಮಾನ ಜ್ಞಾನೋದಯದ ಶತಮಾನ, 18 ನೇ ಶತಮಾನ ಜ್ಞಾನ, ತತ್ವ, 19ನೇಯದು ಪ್ರಗತಿಯ ಶತಮಾನ, 20 ತಂತ್ರ ಜ್ಞಾನ ಹಾಗೂ

21 ಮಾನಸಿಕ ರೋಗಿಗಳ, ಭಯೋತ್ಪಾದಕರ ಶತಮಾನ. ಈಗ ನಮ್ಮ ಸಮಾಜದ ಬಹು ದೊಡ್ಡ ದುರಂತ ಭಯೋತ್ಪಾದನೆ. 1. ರಾಜಕೀಯ ಭಯೋತ್ಪಾದನೆ: ಯುದ್ಧ ಆಯುದಗಳ, ಗನ್ ಬಾಂಬ್ ಗಳ ಭಯೋತ್ಪಾದನೆ. 2. ಧಾರ್ವಿುಕ ಭಯೋತ್ಪಾದನೆ. 3. ಮಾಧ್ಯಮ ಭಯೋತ್ಪಾದನೆ. ದೇಶದ ರಕ್ಷಣೆ, ಭದ್ರತೆ ಪ್ರಮುಖ ಆದ್ಯತೆ ಹೌದು. ದೇಶದ ಮೇಲಿನ ಪ್ರತಿಯೊಂದು ಆಕ್ರಮಣವನ್ನು ತಡೆಯುವುದು ಕರ್ತವ್ಯವೂ ಹೌದು. ಆದರೆ ಈ ರಕ್ಷಣೆಯ ಹೆಸರಲ್ಲಿ ಪಾಕಿಸ್ತಾನದವರು ಈಗ ಮಾಡುತ್ತಿರುವಂತೆ ಅಮಾಯಕ ನಾಗರಿಕರ ನರಮೇಧ ಸಲ್ಲದು. ಭಾರತ -ಪಾಕ್ ಸಂಘರ್ಷಕ್ಕೆ ಕಾರಣವಾದ ಪೆಹಲ್ಗಾಮ್ಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿ ಭಯೋತ್ಪಾದನೆಯ ಪರಮಾವಧಿ.

ಯುದ್ಧದ ಹೆಸರಲ್ಲಿ ನಡೆಯುವ ಅಮಾಯಕ ಜನರ ನರಮೇಧವನ್ನು ಯಾವ ಪ್ರಜ್ಞಾವಂತ ನಾಗರಿಕರೂ ಬಯಸುವುದಿಲ್ಲ. ಆದ್ದರಿಂದ ಭಯೋತ್ಪಾದಕರು ನಮ್ಮ ಗಡಿ ಪ್ರದೇಶದೊಳಗೆ ನುಸುಳದಂತೆ ಆಧುನಿಕ ಭದ್ರತಾ ವ್ಯವಸ್ಥೆಯನ್ನು ಮೊದಲೇ ಮಾಡಬೇಕು. ಯೋಧರಿಗೆ ಆಧುನಿಕ ತಂತ್ರಜ್ಞಾನದ ಪರಿಕರಗಳನ್ನು ನೀಡಿ ವೈರಿಗಳು ಒಳ ಪ್ರವೇಶಿಸುವುದನ್ನು ತಡೆಯುವಂತಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net