ತೆಂಗು ಮತ್ತು ತಾಳೆ ಮರದ ಭಾಗಗಳು, ಮರದ ಒಣಗಿದ ಎಲೆಗಳನ್ನೂ ಮನೆಗಳಲ್ಲಿ ಇಂಧನವಾಗಿ ಬಳಸುವುದುಂಟು. ಆದರೆ ಮರ ಅಥವಾ ಸೌದೆ ಗಟ್ಟಿ ಉರುವಲಾದ್ದರಿಂದ ಅವುಗಳ ಬಳಕೆಗೆ ಹೆಚ್ಚು ಒಲವು. ನೀಲಗಿರಿ, ಮಾವು, ಹೊಂಗೆ, ಅಕೇಷಿಯಾ, ಮರಗಳ ತುಂಡುಗಳು ಸಾಮಾನ್ಯವಾಗಿ ಉರುವಲ ರೂಪದಲ್ಲಿ ಮಾರುಕಟ್ಟೆಯಲ್ಲಿ ನಮಗೆ ದೊರೆಯುತ್ತದೆ. ಮರವೊಂದನ್ನು ನಮ್ಮ ಹಿತಕ್ಕಾಗಿ ಕತ್ತರಿಸಿದ ವಿಷಯವೊಂದಡೆಯಾದರೆ, ಉರುವಲಾಗಿ ಬಳಸಿದಾಗ ಹೊರಹೊಮ್ಮುವ ಕಾರ್ಬನ್ ಡೈಆಕ್ಸೈಡ್ (CO2), ಕಾರ್ಬನ್ ಮೊನಾಕ್ಸೈಡ್ (CO)ಕೇವಲ ಪರಿಸರಕ್ಕಲ್ಲದೇ ಆರೋಗ್ಯಕ್ಕೂ ಹಾನಿಕಾರಕ.