ಪಾಕಿಸ್ತಾನದಲ್ಲಿ ತಳ್ಳದೆ ಬಸ್​ ಕೂಡ ಮುಂದೋಗಲ್ಲ; ಭಯಂಕರ ಟ್ರೋಲ್​ ಆಗುತ್ತಿದೆ ಈ ವಿಚಾರ

pak
Published on

ಪೇಶಾವರ: ಭಯೋತ್ಪಾದಕರನ್ನು ಸಲಹುತ್ತಿರುವ ಪಾಕಿಸ್ತಾನ ಅಭಿವೃದ್ಧಿಯತ್ತ ಹೆಚ್ಚಿನ ಮಹತ್ವವನ್ನೇನು ಕೊಟ್ಟಿಲ್ಲ. ತೀರಾ ಇತ್ತೀಚೆಗೆ ಆರಂಭವಾದ ಯೋಜನೆಗಳೂ ಕೂಡ ವಿಫಲವಾಗಿ ಪಾಕಿಸ್ತಾನ ಪೇಚಿಗೆ ಸಿಲುಕಿದೆ. ಅದೇ ರೀತಿಯಲ್ಲಿ ಇದೀಗ ಹೊಸದೊಂದು ಯೋಜನೆಯು ವಿಫಲವಾಗಿದ್ದು, ಟ್ರೋಲಿಗರ ಕಣ್ಣಿಗೆ ಸಿಕ್ಕಿದೆ.

ಪೇಶಾವರದದಲ್ಲಿ ಕಳೆದ ಆಗಸ್ಟ್​ನಲ್ಲಿ ಪೆಶಾವರ ಬಸ್​ ರ್ಯಾಪಿಡ್​ ಟ್ರಾನ್ಸಿಟ್​ (ಬಿಆರ್​ಟಿ) ಯೋಜನೆಯನ್ನು ಆರಂಭಿಸಲಾಗಿದೆ. ನಗರದ ಜನರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲು ಆರಂಭಿಸಲಾದ ಈ ಯೋಜನೆ ಮೂಲಕ ಹಲವಾರು ಬಸ್ಸುಗಳನ್ನು ರಸ್ತೆಗಿಳಿಸಲಾಗಿದೆ. ಆದರೆ ಈ ಬಸ್ಸುಗಳು ಕೇವಲ ಮೂರೇ ತಿಂಗಳಲ್ಲಿ ಹಾಳಾಗಿವೆ ಎನ್ನಲಾಗಿದೆ.

ಬಿಆರ್​ಟಿ ಬಸ್ಸೊಂದನ್ನು ಜನರು ತಳ್ಳುವ ಫೋಟೋ ಇದೀಗ ಸಕತ್​ ವೈರಲ್​ ಆಗಿದೆ. ಅಂದ ಹಾಗೆ ಈ ಬಸ್ಸು ಪೇಶಾವರದ ಅದ್ಬಾರ ಬಳಿ ಶುಕ್ರವಾರ ಕೆಟ್ಟು ನಿಂತಿದೆ. ಅದರಲ್ಲಿದ್ದ ಪ್ರಯಾಣಿಕರೇ ಇಳಿದು ಬಸ್ಸನ್ನು ತಳ್ಳಿದ್ದಾರೆ. ಈ ಫೋಟೋಕ್ಕೆ ಟ್ರೋಲಿಗರು ಅನೇಕ ರೀತಿಯ ವ್ಯಾಖ್ಯಾನ ಬರೆಯಲಾರಂಭಿಸಿದ್ದಾರೆ. ಪಾಕಿಸ್ತಾನದ ವಿರೋಧ ಪಕ್ಷದವರೂ ಕೂಡ ಈ ವಿಚಾರದಲ್ಲಿ ಟ್ರೋಲ್​ ಮಾಡಲಾರಂಭಿಸಿದ್ದಾರೆ. ಪಾಕಿಸ್ತಾನದಲ್ಲಿ ಆಡಳಿತ ಪಕ್ಷ ಶಕ್ತಿ ಕಳೆದುಕೊಂಡಾಗ ಈ ರೀತಿ ಮಾನವ ಶಕ್ತಿ ಬಳಸಬೇಕಾಗುತ್ತದೆ ಎಂದು ಅನೇಕರು ಟ್ರೋಲ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net