ಚಿಕ್ಕಮಗಳೂರಲ್ಲಿ ಅಣ್ಣನ ನೆನಪು ನಾಟಕ 9ಕ್ಕೆ

04bnk3
ಅಣ್ಣನ ನೆನಪು ನಾಟಕದ ದೃಶ್ಯ.
Published on

ಬಣಕಲ್: ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸೆ.9 ರಂದು ಸಂಜೆ 6 ಗಂಟೆಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಆಧಾರಿತ ಅಣ್ಣನ ನೆನಪು ನಾಟಕ ಪ್ರದರ್ಶನವಾಗಲಿದೆ.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಣ್ಣನ ನೆನಪು ನಾಟಕ ಪ್ರದರ್ಶನವಾಗಲಿದ್ದು, ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುತ್ತಿರುವ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಹನು ರಾಮಸಂಜೀವ, ರಂಗರೂಪ ಕರಣಂ ಪವನ್ ಪ್ರಸಾದ್, ಅಕ್ಷಯ್ ಭೊಂಸ್ಲೆ ಸಂಗೀತ ನೀಡಲಿದ್ದಾರೆ. ನಾಟಕಕ್ಕೆ ಪ್ರವೇಶ ಉಚಿತವಾಗಿದೆ. ಹೆಚ್ಚಿನ ಮಾಹಿತಿಗೆ 0826320012 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net