ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿದರೆ ತಕ್ಷಣ ಈ ವಾಹನ ಸ್ಥಳಕ್ಕೆ

17 nrp 5
ಎನ್.ಆರ್.ಪುರ ತಾಲೂಕಿನ ಸಿಂಸೆ ಸರ್ಕಲ್‌ನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಅಪರಾಧ ವಿಭಾಗದ ಪಿಎಸ್‌ಐ ಜ್ಯೋತಿ ಜನಜಾಗೃತಿ ಮೂಡಿಸಿದರು.
Published on

ಎನ್.ಆರ್.ಪುರ: ಬೆಂಕಿ ಅನಾಹುತ, ಅಪಘಾತ, ಕಳ್ಳತನ ಮತ್ತಿತರ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 112ಕ್ಕೆ ಕರೆ ಮಾಡಿದರೆ ತಕ್ಷಣ ವಾಹನವು ಸ್ಥಳಕ್ಕೆ ಆಗಮಿಸಲಿದೆ ಎಂದು ಅಪರಾಧ ವಿಭಾಗದ ಪಿಎಸ್‌ಐ ಜ್ಯೋತಿ ತಿಳಿಸಿದರು.
ಅವರು ಸಿಂಸೆ ಸರ್ಕಲ್ ಸಮೀಪ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನೇಕ ಸಂದರ್ಭ ಕಳ್ಳರು ಮೊದಲು ಬಂದು ಮನೆ ಗುರುತಿಸಿಕೊಳ್ಳುತ್ತಾರೆ. ರಾತ್ರಿ ಸಮಯದಲ್ಲಿ ಕಳ್ಳತನ ಮಾಡುತ್ತಾರೆ. ಆದ್ದರಿಂದ ಯಾರಾದರೂ ಅಪರಿಚಿತರು ಅನುಮಾನಾಸ್ಪದವಾಗಿ ಓಡಾಡಿದರೆ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬಹುದು. ಕೆಲವು ವ್ಯಕ್ತಿಗಳು ಅನಾಥಾಶ್ರಮಕ್ಕೆ ದೇಣಿಗೆ ನೀಡಿ ಎಂದು ಬರುತ್ತಿದ್ದಾರೆ ಎಂದು ದೂರುಗಳು ಬರುತ್ತಿದೆ. ನಿಜವಾದ ಅನಾಥಾಶ್ರಮವಾದರೆ ಹಣ ನೀಡಲು ಅಭ್ಯಂತರವಿಲ್ಲ. ಆದ್ದರಿಂದ ದೇಣಿಗೆ ಕೇಳಲು ಬಂದವರಿಗೆ ಪರಿಶೀಲನೆ ಮಾಡಿ ಹಣ ನೀಡಬೇಕು ಎಂದು ಸಲಹೆ ನೀಡಿದರು.
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಸವಾರರು ಸಂಬಂಧಿಸಿದ ಎಲ್ಲ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ವಾಹನದಲ್ಲಿ ಇಟ್ಟುಕೊಳ್ಳಬೇಕು. ಪೊಲೀಸರು ದಾಖಲೆಗಳ ಪರಿಶೀಲನೆಗಾಗಿ ನಿಮ್ಮ ವಾಹನಗಳನ್ನು ಅಡ್ಡ ಹಾಕುತ್ತಾರೆ. ಆಗ ದಾಖಲೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು. 18 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಬಾರದು ಎಂದು ಸೂಚಿಸಿದರು. ಹೆಡ್ ಕಾನ್‌ಸ್ಟೆಬಲ್ ಬಸಂತಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net