ಲ್ಯಾಬ್​​ನಲ್ಲಿ ಅಭಿವೃದ್ಧಿ ಪಡಿಸಿದ ಮಾಂಸ ಸೇವನೆಗೆ ಅನುಮತಿ ನೀಡಿತು ಸಿಂಗಾಪುರ

Lab Grown meat Indicative image
Published on

ಸಿಂಗಾಪುರ: ಜಗತ್ತಿನಲ್ಲೇ ಇದೇ ಮೊದಲ ಬಾರಿಗೆ ಲ್ಯಾಬ್​ನಲ್ಲಿ ಅಭಿವೃದ್ಧಿಪಡಿಸಿದ ಮಾಂಸವನ್ನು ಸೇವಿಸುವುದಕ್ಕೆ ಸಿಂಗಾಪುರ ಸರ್ಕಾರ ಅನುಮತಿ ನೀಡಿದೆ. ಯಾವುದೇ ಪ್ರಾಣಿಯನ್ನು ಹತ್ಯೆಮಾಡದೇ ಅಭಿವೃದ್ಧಿ ಪಡಿಸಿದ ಮಾಂಸವಾದ ಕಾರಣಕ್ಕೆ ಇದಕ್ಕೆ ಕ್ಲೀನ್ ಮೀಟ್, ಕಲ್ಚರ್ಡ್ ಮೀಟ್ ಎಂದೂ ಗುರುತಿಸುತ್ತಾರೆ.

ಸಾಮಾನ್ಯ ಮಾಂಸಕ್ಕೆ ಪರ್ಯಾಯ ಮಾಂಸದ ಹುಡುಕಾಟ ನಡೆದಿದ್ದು, ವಿವಿಧ ನವೋದ್ಯಮಗಳು ಪರ್ಯಾಯ ಮಾಂಸ ಅಭಿವೃದ್ಧಿಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಗ್ರಾಹಕರ ಆರೋಗ್ಯದ ಹಿತದೃಷ್ಟಿ ಹಾಗೂ ಪ್ರಾಣಿ ಹತ್ಯೆ ತಡೆದು, ಅವುಗಳ ಸಂರಕ್ಷಣೆ, ಪರಿಸರ ಕಾಳಜಿ ಎಲ್ಲವನ್ನು ಗಮನದಲ್ಲಿರಿಸಿಕೊಂಡು ಕ್ಲೀನ್ /ಕಲ್ಚರ್ಡ್ ಮೀಟ್ ಅಭಿವೃದ್ಧಿಪಡಿಸುವ ಕೆಲಸ ಮುಂದುವರಿದಿದೆ. ಸಿಂಗಾಪುರದಲ್ಲಿ ಲ್ಯಾಬ್​ನಲ್ಲಿ ಅಭಿವೃದ್ಧಿಪಡಿಸಿದ ಮಾಂಸ ಸೇವನೆ ಶುರುವಾಗುತ್ತಿದ್ದು, ಇದಕ್ಕೆ ಪೂರಕ ಕೆಲಸಗಳನ್ನು ನವೋದ್ಯಮ ಈಟ್ ಜಸ್ಟ್ ಮಾಡಿಕೊಂಡಿದೆ.

ಜಾಗತಿಕವಾಗಿ 24ಕ್ಕೂ ಹೆಚ್ಚು ನವೋದ್ಯಮ ಸಂಸ್ಥೆಗಳು ಲ್ಯಾಬ್​​ಗಳಲ್ಲಿ ಮೀನು, ಬೀಫ್, ಚಿಕನ್ ಅಭಿವೃದ್ಧಿಪಡಿಸುವ ಪರೀಕ್ಷೆ, ಪ್ರಯೋಗಗಳನ್ನು ನಡೆಸಿವೆ. ಎಲ್ಲವೂ ಸರಿಯಾಗಿಯೇ ಮುಂದುವರಿದರೆ 2029ರ ವೇಳೆಗೆ ಈ ಸೆಕ್ಟರ್ 140 ಶತಕೋಟಿ ಡಾಲರ್ ವಹಿವಾಟು ನಡೆಸಲಿದೆ ಎಂದು ಪರಿಣತರು ಅಂದಾಜಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net