

ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಅಭಿಮಾನಿಗಳು ನಟನ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ವಿಷಯಗಳನ್ನು ತಿಳಿಯಲು ಹೆಚ್ಚು ಆಸಕ್ತರಾಗಿದ್ದಾರೆ. ಆದರೀಗೆ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುವ ಇಮ್ರಾನ್ ಮತ್ತು ಅವರ ಗೆಳತಿ ಲೇಖಾ ವಾಷಿಂಗ್ಟನ್ ಕುರಿತು ಊಹಾಪೋಹಗಳು ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿವೆ. ಸದ್ಯ ವದಂತಿಗೆ ಸಂಬಂಧಿಸಿದಂತೆ ನಟಿ ಲೇಖಾ ವಾಷಿಂಗ್ಟನ್(Lekha Washington) ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಲೇಖಾ ವಾಷಿಂಗ್ಟನ್, ಇಬ್ಬರೂ ಒಬ್ಬರನ್ನೊಬ್ಬರು ಹುಚ್ಚುಚ್ಚಾಗಿ ಪ್ರೀತಿಸುತ್ತಿರುವುದಾಗಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ತಮ್ಮ ಸಂಬಂಧವನ್ನು ಇಂದಿನ ದ್ವಿಮುಖ ಜಗತ್ತಿನಲ್ಲಿ ಅಪರೂಪದ ಉಡುಗೊರೆ ಎಂದು ಬಣ್ಣಿಸಿದ್ದಾರೆ. ಈ ದ್ವಿಮುಖ ಜಗತ್ತಿನಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಲೇ ಯಾರೊಂದಿಗಾದರೂ ಬದುಕುವುದು ಮತ್ತು ಮುನ್ನಡೆಯುವುದು ಅಪರೂಪದ ಕೊಡುಗೆಯಾಗಿದೆ ಎಂದು ಅವರು ಹೇಳಿದರು.
ಇದೇ ಸಮಯದಲ್ಲಿ ಇಮ್ರಾನ್ ಖಾನ್ನಲ್ಲಿ ಹೆಚ್ಚಾಗಿ ಇಷ್ಟಪಡುವ ವಿಚಾರವನ್ನು ತಿಳಿಸಿದರು. ಇಮ್ರಾನ್ ಮಾತನಾಡುವ ರೀತಿ ಮತ್ತು ತನ್ನನ್ನು ತಾನು ಹೆಚ್ಚು ಸುಧಾರಿಸಿಕೊಳ್ಳಲು ಅವರು ಪ್ರಯತ್ನವನ್ನು ಇಷ್ಟಪಡುತ್ತೇನೆ. ಜತೆಗೆ ನಮ್ಮ ಸಂವಹನ ಸಾಮರ್ಥ್ಯ ಮತ್ತು ನಮ್ಮನ್ನು ನಾವು ಸುಧಾರಿಸಿಕೊಳ್ಳುವ ವಿಷಯವು ಭವಿಷ್ಯದಲ್ಲಿ ಉತ್ತಮ ಫಲಿತಾಂಶ ನೀಡಲು ಸಹಕಾರಿಯಾಗುತ್ತದೆ. ಇದು ನಮಗೆ ಬೋನಸ್ ಇದ್ದಂತೆ ಎಂದು ಹೇಳಿದ್ದಾರೆ.
ಸಿನಿಮಾ ಸಂದರ್ಶನ ವೇಳೆ ಈ ಇಬ್ಬರು ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದರಲ್ಲಿ ಲೇಖಾ ಅವರ ಕೈಹಿಡಿದು ಇಮ್ರಾನ್ ಖಾನ್ ನಡೆಯುತ್ತಿರುವುದನ್ನು ಕಾಣಬಹುದು.
ಈ ಹಿಂದೆ ಸಂದರ್ಶನವೊಂದರಲ್ಲಿ ಇಮ್ರಾನ್ ಖಾನ್ ತಮ್ಮ ಡೇಟಿಂಟ್ ವಿಚಾರವನ್ನು ಪ್ರಸ್ತಾಪಿಸಿದ್ದರು. ಲೇಖಾ ವಾಷಿಂಗ್ಟನ್ ಮತ್ತು ತಾವು ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭದಿಂದಲೂ ಡೇಟಿಂಗ್ ಮಾಡುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಜತೆಗೆ ಲಿವಿಂಗ್ ಟುಗೆದರ್ ವಿಷಯದ ಕುರಿತು ಚರ್ಚಿಸಿದ ಇಮ್ರಾನ್, ಕರೋನಾ ಸಮಯದಲ್ಲಿ ನಾವು ಒಟ್ಟಿಗೆ ಇರಲು ಇದು ಸರಿಯಾದ ಸಮಯ ಎಂದು ನಿರ್ಧರಿಸಿದ್ದಾಗಿ ತಿಳಿಸಿದ್ದರು.
ಅಂದ್ಹಾಗೆ ಇಮ್ರಾನ್ ಖಾನ್ 2011ರಲ್ಲಿ ಆವಂತಿಕಾ ಮಲಿಕ್ ಅವರನ್ನು ವಿವಾಹವಾದರು. ದಂಪತಿಗೆ ಇಮಾರಾ ಎಂಬ ಮಗಳಿದ್ದಾಳೆ. ಆದರೆ 2019ರಲ್ಲಿ ಇಮ್ರಾನ್ ಆವಂತಿಕಾ ಮಲಿಕ್ ಅವರಿಂದ ವಿಚ್ಛೇದನ ಪಡೆದರು ಎನ್ನಲಾಗಿದೆ. ಆದರೆ ಈ ಊಹಾಪೋಗಳಿಗೆ ಇಮ್ರಾನ್ ಅಥವಾ ಆವಂತಿಕಾ ಇದುವರಿಗೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. (ಏಜೆನ್ಸೀಸ್)