VIDEO | ಬುಲೆಟ್ ಪ್ರೂಫ್ 'ಬಕೆಟ್' ತೊಟ್ಟು ಕೊರ್ಟ್​​ಗೆ ಬಂದ ಇಮ್ರಾನ್ ಖಾನ್!

Imran Khan wears bulletproof bucket on head while visiting court video surfaces
Published on

ಪಾಕಿಸ್ತಾನ: ಕೆಲವು ಪ್ರಕರಣದಲ್ಲಿ ಜಾಮೀನು ಕೋರಿದ್ದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಮಯದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಇಮ್ರಾನ್ ಖಾನ್ ಅವರ ರಕ್ಷಣೆಗೆ ಮಾಡಿರುವ ಹರಸಾಹಸದ ವಿಡಿಯೋ ಸಖತ್​ ವೈರಲ್​ ಆಗಿದೆ.

ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಏಪ್ರಿಲ್ 4 ರಂದು‌ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮತ್ತು ಜಮಾನ್ ಪಾರ್ಕ್ ಪ್ರದೇಶದಲ್ಲಿ ರಾಜ್ಯದ ಆಸ್ತಿಗಳನ್ನು ಸುಟ್ಟು ಹಾಕುವುದು ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ರೇಸ್ ಕೋರ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೂರು ಎಫ್‌ಐಆರ್‌ಗಳಲ್ಲಿ ಇಮ್ರಾನ್ ಖಾನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. 

ಜಾಮೀನು ಪಡೆಯಲು ಬಯಸಿದರೆ‌ ಇಮ್ರಾನ್‌ ಖಾನ್ ವಿಚಾರಣೆಗೆ ಹಾಜರಾಗುವುದು ಕಡ್ಡಾಯ ಎಂದು ನ್ಯಾಯಾಧೀಶರು ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಭಾರೀ ಭದ್ರತೆಯಲ್ಲಿ ಆಗಮಿಸಿದ್ದರು. ಈ ಮೂರು ಪ್ರಕರಣಗಳಲ್ಲಿ ಅವರಿಗೆ ಜಾಮೀನು ದೊರೆತಿದೆ. ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ ಮೂರು ಭಯೋತ್ಪಾದನಾ ಪ್ರಕರಣಗಳಲ್ಲಿ ಜಾಮೀನನ್ನು ಏಪ್ರಿಲ್ 13 ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ:  ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್​ನಿಂದ ಕ್ಯಾನ್ಸರ್; ಸಂತ್ರಸ್ತರಿಗೆ 8.9 ಬಿಲಿಯನ್ ಡಾಲರ್ ಪಾವತಿಸಲು ಸಿದ್ಧವಾದ ಕಂಪನಿ
ಹಲವಾರು ಸಿಬ್ಬಂದಿ ಇಮ್ರಾನ್ ಖಾನ್ ರಕ್ಷಿಸಲು ಬೃಹತ್ ಪಾಲಿಕಾರ್ಬೊನೇಟ್ ಹಾಳೆಗಳನ್ನು ಹಿಡಿದಿದ್ದರು. ಜೊತೆಗೆ‌ ಇಮ್ರಾನ್‌ ಖಾನ್‌ ಅವರ ತಲೆಯನ್ನು ಬುಲೆಟ್ ಪ್ರೂಫ್ 'ಬಕೆಟ್'ನಿಂದ ಮುಚ್ಚಲಾಗಿತ್ತು. ಭದ್ರತಾ ಸಿಬ್ಬಂದಿ, ಬುಲೆಟ್ ಪ್ರೂಫ್ ವಸ್ತುಗಳೊಂದಿಗೆ ಇಮ್ರಾನ್ ಖಾನ್ ಅವರನ್ನು ಎಲ್ಲಾ ಕಡೆಗಳಿಂದಲೂ ಸುತ್ತುವರೆದಿದ್ದರು. ಅವರು ನ್ಯಾಯಾಲಯಕ್ಕೆ ಹಾಜರಾದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಕಳೆದ ವರ್ಷ ವಜೀರಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ದಾಳಿ ನಡೆದಾಗಿನಿಂದ ಖಾನ್ ಅವರಿಗೆ ಜೀವ ಭಯವಿದ್ದು, ಹೆಚ್ಚಿನ ಭದ್ರತೆಯಲ್ಲಿ ಮಾತ್ರ ಹೊರಬರುತ್ತಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net