

ಮುಂಬೈ: ಗರ್ಭಿಣಿಯರಿಗೆ ಉಚಿತ ಪ್ರಯಾಣಗಳಂತಹ ಸೇವೆ ನೀಡುತ್ತಾ ಆಟೋ ಚಾಲಕರು ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಯಾರಾದರೂ ಸಹಾಯ ಹಸ್ತ ಚಾಚಿದಾಗ ಅಪರಿಚಿತರಂತೆ ವರ್ತಿಸುವ ಈ ಕಾಲದಲ್ಲಿ ಈ ಆಟೋ ಚಾಲಕನೊಬ್ಬ ಸೋಶಿಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾನೆ.
ಏರುತ್ತಿರುವ ತಾಪಮಾನವು ಪ್ರತಿಯೊಬ್ಬರೂ ತಾವು ಹೋದಲ್ಲೆಲ್ಲಾ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗುವಂತೆ ಪ್ರೇರೇಪಿಸುತ್ತದೆ. ಪ್ರಯಾಣಿಕರು ಬಿಸಿಲನ್ನು ಸೋಲಿಸಲು ಮತ್ತು ಸವಾರಿಯನ್ನು ಆನಂದಿಸಲು ಸಹಾಯ ಮಾಡುವ ಮುಂಬೈ ಆಟೋ ಚಾಲಕನ ಗೆಸ್ಚರ್ ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆದ್ದಿದ್ದಾನೆ.
ಮುಂಬೈನ ಈ ಆಟೋರಿಕ್ಷಾ ಚಾಲಕನ ಸೀಟಿನ ಹಿಂಭಾಗದಲ್ಲಿ ನೀರು ಉಚಿತವಾಗಿ ದೊರೆಯುತ್ತಿದೆ ಎಂದು ಬರೆದು ನೀರಿನ ಬಾಟಲಿಗಳು, ನ್ಯೂಸ್ ಪೇಪರ್ ಹಾಗೂ ತಿಂಡಿಗಳನ್ನು ಇಡಲಾಗಿದೆ. ಚಾಲಕನ ಕಾರ್ಯವನ್ನು ಶ್ಲಾಘಿಸಿ ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಪೋಸ್ಟ್ ಶೇರ್ ಮಾಡಿದ್ದಾರೆ.
ಈ ಪೋಸ್ಟ್ನಲ್ಲಿ ಆಟೋದ ಒಳಗೆ ನೀರಿನ ಬಾಟಲಿಗಳನ್ನು ನೋಡಬಹುದು. ವಾಹನದೊಳಗೆ, ಚಾಲಕನು ಪ್ರಯಾಣಿಕರಿಗಾಗಿ ಇರಿಸಿದ ನೀರಿನ ಬಾಟಲಿಗಳು. ಇದಕ್ಕೆ ಆತ ದುಡ್ಡು ಪಡೆಯುವುದಿಲ್ಲ. ಬಿಸಿಲಿನ ಝಳ ಹೆಚ್ಚಿರುವ ಕಾರಣ, ಪ್ರಯಾಣಿಕರು ನೀರನ್ನು ಕುಡಿಯುವುದಕ್ಕಾಗಿ ಈ ಬಾಟಲಿಗಳನ್ನು ಇಟ್ಟಿದ್ದಾನೆ. ಈ ಚಾಲಕನ ಕಾರ್ಯಕ್ಕೆ ಶ್ಲಾಘನೆಗಳು ಹರಿದುಬಂದಿವೆ. ಆಟೋ ಚಾಲಕ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.