ಮಾಜಿ ಪ್ರೇಮಿಯ ದೇಹವನ್ನು ತುಂಡು ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದ ಪ್ರಿಯತಮೆ!

Delhi Crime
Published on

ತಮಿಳುನಾಡು: ಯುವತಿಯೊಬ್ಬಳು ತನ್ನ ಮಾಜಿ ಪ್ರೇಮಿಯನ್ನು ಕೊಂದು, ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಚೆನ್ನೈನ ಹೊರವಲಯದಲ್ಲಿ ಎಸೆದು ಹೋಗಿದ್ದಾಳೆ.

ಜಯಂತನ್(29) ಮೃತ. ಚೆನ್ನೈನಲ್ಲಿ ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ. 39 ವರ್ಷದ ಬಕ್ಕಿಯಲಕ್ಷ್ಮಿ ಕೊಲೆ ಆರೋಪಿಯಾಗಿದ್ದಾಳೆ. ಪ್ರಿಯಕರನನ್ನು ಕೊಂದು ಹೂತುಹಾಕಿದ ಆರೋಪದ ಮೇಲೆ ಈಕೆಯನ್ನು ಬಂಧಿಸಲಾಗಿದೆ.

ಬಕ್ಕಿಯಲಕ್ಷ್ಮಿ ಲೈಂಗಿಕ ಕಾರ್ಯಕರ್ತೆ. ಜಯಂತನ್ ಅವಳ ಗ್ರಾಹಕನಾಗಿದ್ದ. ಇಬ್ಬರೂ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಒಂದೆರಡು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿ ನಂತರ ಬೇರೆಯಾದರು. ಮಾರ್ಚ್ 18 ರಂದು, ಬಕ್ಕಿಯಲಕ್ಷ್ಮಿಯನ್ನು ಭೇಟಿಯಾಗಲು ಜಯಂತನ್ ಪುದುಕ್ಕೋಟೈಗೆ ಹೋಗಿದ್ದರು. ಆ ಸಮಯದಲ್ಲಿ, ಮಹಿಳೆ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಅವನನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

ತಾನು ಶವವನ್ನು ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕತ್ತರಿಸಿದ ತುಂಡುಗಳನ್ನು ಕೋವಲಂಗೆ ತಂದು ಎಸೆದಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ನಾವು ಇನ್ನೂ ಸಂಪೂರ್ಣ ವಿವರಗಳನ್ನು ಪಡೆಯಬೇಕಾಗಿದೆ. ಪುದುಕೋಟೈ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಲೈಂಗಿಕ ಕಾರ್ಯಕರ್ತೆಯಾಗಿದ್ದ ಮಹಿಳೆಗೆ ಕೊಲೆ ಮಾಡಲು ಇನ್ನೊಬ್ಬ ವ್ಯಕ್ತಿ ಸಹಾಯ ಮಾಡಿದ್ದನು. ಬಲಿಪಶು ಯುವಕ ಚೆನ್ನೈನಲ್ಲಿ ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ. ಮೃತನ ಸಹೋದರಿ ಅಣ್ಣ ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ಈ ಕುರಿತಾಗಿ ನಾವು ತನಿಖೆ ಆರಂಭಿಸಿದಾಗ ಈ ಪ್ರಕರಣ ಹೊರ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net