ಎಲೆಕ್ಟ್ರಿಕ್ ಬಸ್ ಗಳ ಪೂರೈಕೆಯಲ್ಲಿ ಸುಧಾರಣೆ: ಸಚಿವ ರಾಮಲಿಂಗಾರೆಡ್ಡಿ ಪ್ರಸ್ತಾಪ | GST framed Bid suitable

Transport minister met HDK
Published on

ಬೆಂಗಳೂರು: ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ ನೀಡುತ್ತಿರುವ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲಕರನ್ನು ಖಾಸಗಿಯವರು ಒದಗಿಸುತ್ತಿದ್ದಾರೆ. ಅದರ ಬದಲು ಸಂಸ್ಥೆಯ ಚಾಲಕರನ್ನು ಬಳಕೆಗೆ ಅವಕಾಶ ನೀಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಭಾನುವಾರ ಭೇಟಿ ಮಾಡಿ ಪ್ರಾತ್ಯಕ್ಷಿಕೆ ಸಹಿತ ಹಲವು ಬೇಡಿಕೆಗಳನ್ನು ಪ್ರಸ್ತಾಪಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳ ಅವಶ್ಯಕತೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ಯೋಜನೆಯಡಿ ಮುಂದಿನ ದಿನಗಳಲ್ಲಿ ಜಿಎಸ್‌ಟಿ ಅಂತರ್ಗತವಾದ ಚೌಕಟ್ಟಿನಲ್ಲಿ ಬಿಡ್ಡಿಂಗ್ ದರ ಕಡ್ಡಾಯ ಮಾಡುವುದರಿಂದ ಜಿಎಸ್‌ಟಿ ಕೈಗೆಟುಕುವ ರೀತಿಯಲ್ಲಿ ಸಬಲವಾಗುತ್ತದೆ. ಜತೆಗೆ ಪ್ರತಿ ಕಿ.ಮೀ. ಉಲ್ಲೇಖಿತ ದರ ಹೆಚ್ಚಲಿದ್ದು, ಬಿಡ್‌ದಾರರಿಗೆ ಇನ್‌ಪುಟ್ ತೆರಿಗೆ ಕ್ರೆಡಿಟ್ ನಿರಾಕರಣೆಯು ತಪ್ಪಲಿದೆ ಎಂದು ವಿವರಿಸಿದರು.

ಸ್ವತಂತ್ರ ವಿದ್ಯುತ್ ಉತ್ಪಾದನೆ

ಎಲ್ಲ ಎಲೆಕ್ಟ್ರಿಕ್ ಬಸ್‌ಗಳಿಗೆ ಎಸ್ಕಾಂಗಳ ವಿದ್ಯುತ್ ಪೂರೈಸುತ್ತಿವೆ. ಬಿಡ್ಡರ್‌ಗಳು ತಮ್ಮದೇ ಆದ ಸ್ವತಂತ್ರ ವಿದ್ಯುತ್ ಉತ್ಪಾದನೆ ಸೌಲಭ್ಯ ಹೊಂದುವುದಕ್ಕೆ ಕೇಂದ್ರ ಸರ್ಕಾರ ಉತ್ತೇಜಿಸಬೇಕು. ಈ ಕ್ರಮದಿಂದ ಒಪ್ಪಂದದ ಅವಧಿಗೆ ವಿದ್ಯುತ್ ವೆಚ್ಚವನ್ನು ತಗ್ಗಿಸಲಿದೆ ಎಂದು ತಿಳಿಸಿದರು.

ಡ್ರೈಲೀಸ್ ಗುತ್ತಿಗೆ ನಿಬಂಧನೆಗಳನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ. ನಿಬಂಧನೆಗಳು ನಮ್ಯವಾದಷ್ಟು ಸಾರಿಗೆ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ಚಾಲ್ತಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಇನ್ನಷ್ಟು ಸುಧಾರಿಸಲು, ನಿಯೋಜನೆಗೆ ಮತ್ತಷ್ಟು ವೇಗ ನೀಡಲು ರಾಜ್ಯಗಳಿಗೆ ಅನುವು ಮಾಡಿಕೊಡಲಿದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net