

ನವದೆಹಲಿ: ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ವರದಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆ, ಆರೋಗ್ಯ ಮತ್ತು ಪೌಷ್ಟಿಕತೆಯ ದತ್ತಾಂಶಗಳನ್ನು ಈ ಸಮೀೆ ಒಳಗೊಂಡಿದೆ. ಇದು 2019&21ನೇ ವರ್ಷಗಳಿಗೆ ಸಂಬಂಧಿಸಿದ ಸಮೀಕ್ಷೆಯಾಗಿದೆ.
ಎನ್ಎಫ್ಎಚ್ಎಸ್-4ಕ್ಕೆ ಹೋಲಿಸಿದರೆ, ಕುಟುಂಬಗಳ ಕುಡಿಯುವ ನೀರಿನ ಮೂಲದಲ್ಲಿ ಶೇಕಡ 96 ಹಾಗೂ ನೈರ್ಮಲ್ಯ ವಿಚಾರದಲ್ಲಿ ಶೇಕಡ 69 ಸುಧಾರಣೆಯಾಗಿದೆ ಎಂದು ಹೊಸ ಸಮೀಾ ವರದಿ ಹೇಳಿದೆ. ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣವೂ ಜಾಸ್ತಿಯಾಗಿರುವುದನ್ನು ಸಮೀೆ ಕಂಡುಕೊಂಡಿದೆ. ಅಂದರೆ, ಈ ಪ್ರಮಾಣ ಶೇಕಡ 79ರಿಂದ 89ಕ್ಕೆ ಏರಿದೆ.
ತಂಬಾಕು-ಮದ್ಯ ಸೇವನೆ: 15 ವರ್ಷ ಮೇಲ್ಪಟ್ಟ ವಯೋಮಿತಿಯ ಶೇ.38 ಪುರುಷರು ಹಾಗೂ ಶೇ. 9 ಮಹಿಳೆಯರಲ್ಲಿ ತಂಬಾಕು ಸೇವನೆ ಅಭ್ಯಾಸವಿದೆ. ಶೇ.19 ಗಂಡಸರು ಹಾಗೂ ಶೇ.1 ಸ್ತ್ರೀಯರಲ್ಲಿ ಮದ್ಯ ಸೇವನೆ ಚಟವಿದೆ ಎಂದು ವರದಿ ಹೇಳಿದೆ.
ಪುರುಷರಲ್ಲಿ ಟಿಬಿ ಅಧಿಕ: ಒಂದು ಲಕ್ಷ ಪುರುಷರಲ್ಲಿ ತಲಾ 283 ಹಾಗೂ ಲಕ್ಷ ಮಹಿಳೆಯರಲ್ಲಿ 162 ಮಂದಿ ಕ್ಷಯಪೀಡಿತರಾಗಿದ್ದಾರೆ ಎಂಬುದು ಸಮೀೆಯಿಂದ ಗೊತ್ತಾಗಿದೆ. 15ಕ್ಕಿಂತ ಹೆಚ್ಚು ವಯಸ್ಸಿನವರ ಪೈಕಿ ಶೇ. 21 ಮಹಿಳೆಯರು ಹಾಗೂ ಶೇ. 24 ಪುರುಷರು ಅಧಿಕ ರಕ್ತದೊತ್ತಡದಿಂದ (ಹೈಪರ್ಟೆನ್ಷನ್) ಬಳಲುತ್ತಿದ್ದಾರೆ.
ಮಕ್ಕಳಲ್ಲಿ ರಕ್ತಹಿನತೆ
6ರಿಂದ 59 ತಿಂಗಳ ಮಕ್ಕಳಲ್ಲಿ ಶೇಕಡ 67ರಷ್ಟು ರಕ್ತಹಿನತೆ ಇರುವುದು ಕಂಡುಬಂದಿದೆ. ಶೇ. 57 ಸ್ತ್ರೀಯರು ಹಾಗೂ ಶೇ.25 ಗಂಡಸರು ರಕ್ತಹಿನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪೌಷ್ಟಿಕತೆಯ ಸ್ಥಿತಿಗತಿ ಕುರಿತ ವರದಿಯಲ್ಲಿ ದಾಖಲಾಗಿರುವ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡ ಮೂರರಷ್ಟು ಮಕ್ಕಳು ಸಾಮಾನ್ಯಕ್ಕಿಂತ ಅಧಿಕ ತೂಕ ಹೊಂದಿದ್ದಾರೆ. ಶೇ. 19 ಮಕ್ಕಳು ಸಣ್ಣಗಿದ್ದು (ವೇಸ್ಟೆಡ್) ಶೇ.36 ಮಕ್ಕಳು ಗಿಡ್ಡ (ಸ್ಟನ್ಡ್) ಆಗಿದ್ದಾರೆ ಎಂದು ವರದಿ ಹೇಳಿದೆ. 12ರಿಂದ 23 ತಿಂಗಳೊಳಗಿನ ಕೂಸುಗಳಲ್ಲಿ ಶೇ. 23ರಷ್ಟು ಮಕ್ಕಳು ಕಾಲಕಾಲಕ್ಕೆ ಮೂಲಭೂತ ಲಸಿಕೆಗಳನ್ನು ಪಡೆದಿದ್ದಾರೆ.
ಗುಹ್ಯ ರೋಗಗಳು
ಶೇ.12ರಷ್ಟು ಸ್ತ್ರೀಯರು ಹಾಗೂ ಶೇ. 9ರಷ್ಟು ಪುರುಷರು ಲೈಂಗಿಕವಾಗಿ ಹರಡುವ ಸೋಂಕು (ಎಸ್ಟಿಐ) ಹೊಂದಿದ್ದಾರೆಂದು ವರದಿ ತಿಳಿಸಿದೆ. 18ರಿಂದ 29 ವಯಸ್ಸಿನ ಹೆಣ್ಣುಮಕ್ಕಳ ಗುಂಪಿನಲ್ಲಿ ಶೇ. 25 ಮಂದಿ ಮದುವೆ ಆದರೆ, ಪುರುಷರಲ್ಲಿ 21ರಿಂದ 29ರ ವಯಸ್ಸಿನಲ್ಲಿ ಶೇ. 15 ಮಂದಿ ಲಗ್ನವಾಗುತ್ತದೆ.
ಲವಂತಿಕೆ ಕುಸಿತ: ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಅಂದರೆ ಲವಂತಿಕೆ ದರ ಶೇ. 2.2ರಿಂದ ಶೇ. 2ಕ್ಕೆ ಕುಸಿದಿದೆ ಎಂದು ಎನ್ಎ್ಎಚ್ಎಸ್&5 ಹೇಳಿದೆ. ಪ್ರತಿ ಮಹಿಳೆ ಹೊಂದಿರುವ ಸರಾಸರಿ ಮಕ್ಕಳ ಪ್ರಮಾಣವೇ ಟಿಎ್ಆರ್. ಗರ್ಭನಿರೋಧಕಗಳ ಬಳಕೆ ದರ (ಸಿಪಿಆರ್) ಶೇ. 67ಕ್ಕೆ ಹೆಚ್ಚಳವಾಗಿರುವುದನ್ನು ಸಮೀೆ ದಾಖಲಿಸಿದೆ. ಮಹಿಳೆಯರಲ್ಲಿ ಆಧುನಿಕ ಗರ್ಭನಿರೋಧಕ ಸಾಧನಗಳ ಬಳಕೆ ಶೇ. 48ರಿಂದ ಶೇ. 56ಕ್ಕೆ ಏರಿದೆ. 15ರಿಂದ 49 ವರ್ಷದೊಳಗಿನ ಮಹಿಳೆಯರ ಪೈಕಿ ಶೇ. 33ರಷ್ಟು ಸ್ತ್ರೀಯರು ಯಾವುದೇ ಬಗೆಯ ಗರ್ಭನಿರೋಧಕ ವಿಧಾನವನ್ನು ಬಳಸುವುದಿಲ್ಲ. ಉಳಿದ ಶೇ. 67 ಮಹಿಳೆಯರಲ್ಲಿ ಸಂತಾನಶಕ್ತಿಹರಣ (38%), ಕಾಂಡಮ್ (9.5%), ರಿದಂ (6.2%), ಮಾತ್ರೆ (5.1%) ಹಾಗೂ ಶೇಕಡ 4ರಷ್ಟು ಮಹಿಳೆಯರು ಸ್ಖಲನ ವೇಳೆ ಹಿಂಪಡೆಯುವಿಕೆ (ವಿದ್ಡ್ರಾವಲ್) ವಿಧಾನವನ್ನು ಅನುಸರಿಸುವುದು ಕಂಡುಬಂದಿದೆ. ಒಟ್ಟು ಗರ್ಭಪಾತದ ಪೈಕಿ ಶೇಕಡ 3ರಷ್ಟು ಬಯಸಿಯೇ ನಡೆಸುವಂಥ ಗರ್ಭಪಾತವಾಗಿದೆ. ಶೇ.7ರಷ್ಟು ಆಕಸ್ಮಿಕವಾಗಿ ನಡೆಯುವ ಗರ್ಭಪಾತವಾಗಿದೆ. ಶೇ. 48ರಷ್ಟು ಗರ್ಭಪಾತದ ಪ್ರಕರಣಗಳು ಯೋಜಿತವಲ್ಲದ ಗರ್ಭಧಾರಣೆಯ ಲವಾಗಿದೆ ಎಂಬುದನ್ನು ಎನ್ಎ್ಎಸ್ಎಸ್ ಕಂಡುಕೊಂಡಿದೆ.