

Karnataka Budget: ಇಂದು (ಮಾ.07) ಬಹುನಿರೀಕ್ಷಿತ ರಾಜ್ಯ ಬಜೆಟ್ (2025-26) ಆಯವ್ಯಯವನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ ಇತಿಹಾಸದಲ್ಲಿ 16ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. 4.08 ಲಕ್ಷ ಕೋಟಿ ರೂ. ಬಜೆಟ್ ಗಾತ್ರದಲ್ಲಿ ಬಜೆಟ್ ಮಂಡಿಸಿದ ಸಿಎಂ, ರಾಜ್ಯದ ಹಲವು ಜಿಲ್ಲೆಗಳು, ವಿಭಾಗಗಳಿಗೆ ವಿಶೇಷ ಅನುದಾನ, ಬಂಪರ್ ಕೊಡುಗೆ ಹಾಗೂ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ.
ರಾಜ್ಯದ ಸರ್ಕಾರಿ ಹಾಗೂ ಫ್ರೌಡ ಶಾಲೆಗಳ ಅತಿಥಿ ಶಿಕ್ಷಕರಿಗೆ ಮಾಸಿಕ 2000 ರೂ. ಗೌರವ ಧನವನ್ನು ನೀಡಿದರೆ, ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ 1000 ರೂ. ಘೋಷಿಸುವ ಮೂಲಕ ಬಜೆಟ್ ಪ್ರಾರಂಭಿಸಿದರು. ಮೀನುಗಾರಿಕೆ, ಚಿತ್ರೋದ್ಯಮ, ಶಿಕ್ಷಣ ಇಲಾಖೆ, ಸಣ್ಣ ಕೈಗಾರಿಕೆ, ಇಂಧನ ಇಲಾಖೆ, ರೈತರು, ನೀರಾವರಿ ಇಲಾಖೆ, ಸಾರಿಗೆ ಇಲಾಖೆ, ಬೆಂಗಳೂರು ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಗುತ್ತಿಗೆ ಕಾಮಗಾರಿ ಸೇರಿದಂತೆ ಇಲಾಖಾವಾರು ಅನುದಾನ ಹಂಚಿಕೆ ಮಾಡಲಾಯಿತು.