

ವೀರಶೆವನಾದವನು ನಿತ್ಯದಲ್ಲೂ ಲಿಂಗಾರ್ಚನೆಯನ್ನು ಮಾಡಬೇಕು. ಜ್ಞಾನ ಕ್ರಿಯಾಚಾರ ಉಳ್ಳವರೇ ನಿಜವಾದ ವೀರಶೆವರು. ಶಿವನಲ್ಲಿ ಅಪರಿಮಿತ ಶ್ರದ್ಧಾ ಭಕ್ತಿಯನ್ನಿಟ್ಟುಕೊಂಡಿರುವಾತನೇ ಭಕ್ತನೆಂದೆನಿಸಿಕೊಳ್ಳುವನು. ಜಗದ ಸಕಲ ಜೀವ ರಾಶಿಗಳಿಗಿಂತ ಭಿನ್ನತೆ&ವಿಭಿನ್ನತೆಯಿಂದ ಕೂಡಿರುವ ಮನುಷ್ಯ ಕುಲವೇ ಶ್ರೇಷ್ಠ.
ಚಂದ್ರಕಾಂತ ಶಿಲೆಯಲ್ಲಿ ನೀರು, ಸೂರ್ಯಕಾಂತ ಶಿಲೆಯಲ್ಲಿ ಬೆಂಕಿ, ಬೀಜದಲ್ಲಿ ಅಂಕುರವಿರುವಂತೆ ಆತ್ಮನಲ್ಲಿ ಪರಮಾತ್ಮನು ನೆಲೆಸಿರುವನು. ಇಂದ್ರಿಯ, ದೇಹ, ಬುದ್ಧಿ ಆತ್ಮವಲ್ಲ. ನಾನೆಂಬ ಅರಿವಿಗೆ ಕಾರಣವಾದ ಚೇತನವೇ ನಿಜವಾದ ಆತ್ಮ. ಹುಟ್ಟು&ಮತ್ಯು ಯಾರನ್ನೂ ಬಿಟ್ಟಿಲ್ಲ. ಸರ್ವಗುಣ ಸಂಪನ್ನನಾದ ಶ್ರೀ ಗುರುವಿನ ಮೂಲಕ ವೇದದೀೆ, ಮಂತ್ರದಿ, ಕ್ರಿಯಾದೀೆ ಪಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ.
ಪ್ರಪಂಚಕ್ಕೆ ಅತೀತನೂ ಶಾಶ್ವತನೂ ಆಗಿರುವ ಪರಬ್ರಹ್ಮವೇ ಇಷ್ಟಲಿಂಗ. ಯಾರು ಇಷ್ಟಲಿಂಗ ಧರಿಸಿ ಪೂಜಿಸುವರೋ ಅವರಿಗೆ ಜನನ ಮರಣಾದಿಸೂತಕಗಳು ಬಾಧಿಸಲಾರವು. ಭಕ್ತನಾದವನು ಶಿವನಲ್ಲಿ ಭಕ್ತಿ ಹೊಂದಿರು ವಂತೆ ಶ್ರೀಗುರುವಿನಲ್ಲಿಯೂ ಭಕ್ತಿಯನ್ನು ಹೊಂದಿರಬೇಕು. ಜ್ಞಾನ ಸಾಧನಸಮರ್ಥವಾದ ದುರ್ಬಲವಾದ ಮಾನವ ಜನ್ಮವನ್ನು ಹೊಂದಿ ಮಹದೇವನನ್ನು ಅರಿಯದಿದ್ದರೆ ಜೀವನ ನಿರರ್ಥಕವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ನಿರೂಪಿಸಿದ್ದಾರೆ.
ಶಿವಾತ್ಮಕವೂ ಜ್ಯೋತಿರ್ಮಯವೂ ಆದ ಇಷ್ಟಲಿಂಗವೇ ಶ್ರೇಷ್ಠವೆಂದು ಶತಿ ಸಾರುತ್ತದೆ.ಅಜ್ಞಾನ ದಿಂದ ಮಲಿನವಾದ ಚಿತ್ತವೆಂಬ ಮುಕುರವನ್ನು ಸ್ವಾನುಭೂತಿ ಯೆಂಬ ವಿಭೂತಿಯಿಂದ ನಿರ್ಮಲಗೊಳಿಸುವಾತನೇ ಗುರು ಶ್ರೇಷ್ಠನೆಂದು ಶಾಸ್ತ್ರ ನಿರೂಪಿಸುತ್ತದೆ. ಗುರಿಯಿಲ್ಲದ ಮತ್ತು ಗುರು ಇಲ್ಲದ ಜೀವನನಿರರ್ಥಕ. ಹೆತ್ತ ತಾಯ್ತಂದೆ ಮತ್ತೆ ಗುರುವಿನ ಋಣ ಎಷ್ಟು ತೀರಿಸಿದರೂ ಸಾಲದು.