ಬ್ರಹ್ಮಚರ್ಯದ ಮಹತ್ವ

1-684c62df02ef6
Published on
ವೀರ ವೇದಾಂತಿ, ಪುರುಷ ಸಿಂಹ, ಪವಿತ್ರದ ಮೂರ್ತ ಸ್ವರೂಪರಾದ ಸ್ವಾಮಿ ವಿವೇಕಾನಂದರು, ‘ಬ್ರಹ್ಮಚರ್ಯ ಪಾಲನೆಯಿಂದ ಶಕ್ತಿಯನ್ನು ಪಡೆಯಬಹುದು. ಪವಿತ್ರ ಮನಸ್ಸು ಪರಮಾದ್ಭುತ ಶಕ್ತಿ ಹಾಗೂ ಪ್ರಚಂಡ ಇಚ್ಛಾ ಶಕ್ತಿಯನ್ನು ಹೊಂದುತ್ತದೆ. ಬ್ರಹ್ಮಚರ್ಯ ಪಾಲನೆಯಿಲ್ಲದೆ ಆಧ್ಯಾತ್ಮಿಕ ಜೀವನ ಅಸಾಧ್ಯ. ಬ್ರಹ್ಮಚರ್ಯವು ಮನುಕುಲದ ಮೇಲೆ ಹತೋಟಿಯನ್ನು ಸಾಧಿಸಲು ನೆರವಾಗುತ್ತದೆ.

ಜಗತ್ತಿನ ಎಲ್ಲಾ ಆಧ್ಯಾತ್ಮಿಕ ವ್ಯಕ್ತಿಗಳು ಬ್ರಹ್ಮಚರ್ಯುಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಅದು ಅವರಿಗೆ ಅನಂತ ಶಕ್ತಿಯನ್ನು ತಂದುಕೊಟ್ಟಿತು. ಆದ್ದರಿಂದ ಆಧ್ಯಾತ್ಮಿಕ ಪ್ರಗತಿಯನ್ನು ಬಯಸುವವರು ಬ್ರಹ್ಮಚರ್ಯುಯನ್ನು ಖಂಡಿತವಾಗಿ ಪಾಲಿಸಬೇಕು’ ಎಂದು ಹೇಳಿದ್ದಾರೆ. ಆದರೆ ಇತ್ತೀಚಿನ ದಿವಸಗಳಲ್ಲಿ ಸ್ವಾತಂತ್ರ್ಯದ ಹೆಸರಿನಲ್ಲಿ, ಸುಖವನ್ನು ಅನುಭವಿಸುವ ಭರದಲ್ಲಿ ಯುವಕ-ಯುವತಿಯರು ಅನೇಕ ರೀತಿಯ ತಪು್ಪ ಕಾರ್ಯಗಳನ್ನು ಎಸಗುತ್ತಿದ್ದಾರೆ. ಅಲ್ಲದೆ ವೀರ್ಯವಂತರಾಗುವ ಬದಲು, ವೀರ್ಯಹೀನ ರಾಗಿ ಅನೇಕ ಶಾರೀರಿಕ-ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ಅಂತಹ ನಿಶ್ಯಕ್ತ ಮನಸ್ಸಿನಿಂದ ಆನಂದದಾಯಕ ಜೀವನ ನಡೆಸಲು ಸಾಧ್ಯವಿಲ್ಲ. ಇನ್ನು ಉನ್ನತ ವಿಚಾರ-ಆಚಾರಗಳನ್ನು ಹೊಂದಿರಬೇಕಾದ ಆಧ್ಯಾತ್ಮಿಕ ಜೀವನ ನಡೆಸುವುದು ಬಹು ದೂರದ ಮಾತು. ಮನೋ ನಿಯಂತ್ರಣ ಬೇಕೆ?: ಸಾಧು-ಸಂತರಿಗೆ, ಆಧ್ಯಾತ್ಮಿಕ ವ್ಯಕ್ತಿಗಳಿಗೆ ಮಾತ್ರ ಮನೋ ನಿಯಂತ್ರಣ, ಅಧ್ಯಾತ್ಮ; ನಾವೋ ಜನ ಸಾಮಾನ್ಯರು, ಅದೆಲ್ಲ ನಮಗೆ ಅವಶ್ಯಕವಲ್ಲ. ಆದ್ದರಿಂದ ಮನಸ್ಸಿಗೆ ಬಂದಂತೆ ಜೀವನ ನಡೆಸಬಹುದು ಎಂಬ ಭ್ರಾಂತಿ, ಹುಚ್ಚು ಕಲ್ಪನೆ ಅನೇಕರಲ್ಲಿದೆ.

ಭಗವದ್ಗೀತೆ ಇದರ ಕುರಿತು ಹೀಗೆ ಹೇಳುತ್ತದೆ: ಯಾರ ಮನಸ್ಸು ಅವನ ಹತೋಟಿಯಲ್ಲಿರುತ್ತದೆಯೋ ಅವನು, ಅವನಿಗೆ ನಿಜವಾದ ಮಿತ್ರ. ಯಾರ ಮನಸ್ಸು ಹತೋಟಿಯಲ್ಲಿರುವುದಿಲ್ಲವೋ ಅವನು, ಅವನ ನಿಜವಾದ ಶತ್ರು. ನಿಗ್ರಹ ಮನಸ್ಸಿನ ಸಹಾಯದಿಂದ ನಾವು ಮಹಾನ್ ಕಾರ್ಯಗಳನ್ನು ಮಾಡಬಹುದು. ಅದು ನಮಗೆ ಶ್ರೀರಕ್ಷೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಪ್ರತಿಯೊಬ್ಬ ಮಾನವನಿಗೂ ಮನೋ ನಿಯಂತ್ರಣ, ಮೌಲ್ಯಾಧಾರಿತ ಜೀವನ ಅತ್ಯವಶ್ಯಕ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net