ಕಮಲೇಶ್‌ಚಂದ್ರ ವರದಿ ಜಾರಿಗೊಳಿಸಿ

post
ಶಿವಮೊಗ್ಗದಲ್ಲಿ ಗ್ರಾಮೀಣ ಅಂಚೆ ಸೇವಕರು ಪ್ರತಿಭಟನೆ ನಡೆಸಿದರು. ವೆಂಕಟೇಶ್, ಎಚ್.ಆರ್.ಭಾಸ್ಕರ್, ಎಚ್.ವಿ.ರಾಜಕುಮಾರ್, ಕೆ.ರಾಮಪ್ಪ ನಾಯ್ಕ, ಜಾನಕಿ ಇದ್ದರು.
Published on

ಶಿವಮೊಗ್ಗ: ಕಮಲೇಶ್‌ಚಂದ್ರ ನೇತೃತ್ವದ ಸಮಿತಿ ವರದಿಯನ್ನು ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಪ್ರಧಾನ ಅಂಚೆ ಕಚೇರಿ ಎದುರು ಗ್ರಾಮೀಣ ಅಂಚೆ ಸೇವಕರು ಗುರುವಾರ ಪ್ರತಿಭಟನೆ ನಡೆಸಿದರು.

ಕಮಲೇಶ್‌ಚಂದ್ರ ಸಮಿತಿ ಏಳನೇ ವೇತನದ ಆಯೋಗ ವರದಿ ಜಾರಿಗೆ ಸಲಹೆ ನೀಡಿ ಆರು ವರ್ಷ ಕಳೆದಿದ್ದರೂ ಅದನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರ ವಿಲವಾಗಿದೆ. ಇದನ್ನು ಜಾರಿಗೊಳಿಸುವುದಾಗಿ ಸರ್ಕಾರ ಅನೇಕ ಬಾರಿ ಭರವಸೆ ನೀಡಿದೆ. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಳೆದ ಜೂನ್‌ನಲ್ಲಿ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೆವು. ಆಗ ಮತ್ತೊಮ್ಮೆ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿತ್ತು. ಇಂದಿಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿಗೂ ಜಿಡಿಎಸ್ ನೌಕರರು ಕಾನೂನುಬದ್ಧವಾದ ಯಾವುದೇ ಸವಲತ್ತುಗಳನ್ನು ಪಡೆದುಕೊಂಡಿಲ್ಲ. ನಿವೃತ್ತ ಜಿಡಿಎಸ್ ನೌಕರರಿಗೆ ತಾತ್ಕಾಲಿಕ ಪಿಂಚಣಿ ನೀಡಬೇಕು. ಗುಂಪು ವಿಮಾ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕು. ಕುಟುಂಬದ ಸದಸ್ಯರಿಗೂ ವೈದ್ಯಕೀಯ ಸೌಲಭ್ಯ ನೀಡಬೇಕು. ಕೆಲಸಕ್ಕೆ ಸಮನಾದ ವೇತನ ನೀಡಬೇಕು. ಕೆಲಸದ ಅವಧಿಯನ್ನು 8 ತಾಸಿಗೆ ಸೀಮಿತಗೊಳಿಸಬೇಕೆಂದು ಆಗ್ರಹಿಸಿದರು.
ಗ್ರಾಮೀಣ ಅಂಚೆ ಸೇವಕರ ಸಂಘ ಶಿವಮೊಗ್ಗ ವಿಭಾಗದ ಕಾರ್ಯದರ್ಶಿ ಎಚ್.ಆರ್.ಭಾಸ್ಕರ್, ಅಧ್ಯಕ್ಷ ವೆಂಕಟೇಶ್, ಖಜಾಂಚಿ ಕೆ.ರಾಮಪ್ಪ ನಾಯ್ಕ, ವಲಯ ಅಧ್ಯಕ್ಷ ಎಚ್.ವಿ.ರಾಜಕುಮಾರ್, ಪ್ರಮುಖರಾದ ಮಂಜಪ್ಪ, ಜಾನಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net