ಉಡುಪಿನ ಅನುಕರಣೆ ಗಾಂಧಿವಾದವಲ್ಲ: ಸಾಣೇಹಳ್ಳ್ಯಿ ಶ್ರೀ

sanehalli sri
ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಗಾಂಧಿ ಜಯಂತಿಯಲ್ಲಿ ಎಸ್.ಬಿ.ವಾಸುದೇವ ಅವರ ನನ್ನ ಪ್ರೀತಿಯ ಅಪ್ಪ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಪಂಡಿತಾರಾಧ್ಯ ಶ್ರೀಗಳು, ಎಸ್.ಬಿ.ವಾಸುದೇವ, ಎನ್.ಎಲ್.ನಾಯಕ್, ಎಚ್.ಎಸ್.ಸುಂದರೇಶ್, ಎಸ್.ಬಿ.ಅಶೋಕಕುಮಾರ್ ಇತರರಿದ್ದರು.
Published on

ಶಿವಮೊಗ್ಗ: ಗಾಂಧಿವಾದ ಎಂದರೆ ಗಾಂಧೀಜಿ ಅವರು ಉಡುಪಿನ ಅನುಕರಣೆ ಮಾಡುವುದಲ್ಲ. ಬದಲಿಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದು. ವಿಪರ್ಯಾಸ ಎಂದರೆ ಅವರ ಆದರ್ಶಗಳನ್ನೆಲ್ಲ ಗಾಳಿಗೆ ತೂರುವ ನಕಲಿ ಗಾಂಧಿವಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತರಳಬಾಳು ಶಾಖಾ ಮಠ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಗಾಂಧಿ ಜಯಂತಿ ಹಾಗೂ ಪ್ರತಿಷ್ಠಾನದ 78ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿಗೆ ಅಧಿಕಾರಕ್ಕಿಂತ ಆದರ್ಶವೇ ಮುಖ್ಯವಾಗಿತ್ತು. ಅವರು ಬಯಸಿದ್ದರೆ ರಾಜಕೀಯವಾಗಿ ಉನ್ನತ ಸ್ಥಾನ ಪಡೆಯಬಹುದಿತ್ತು ಎಂದು ಹೇಳಿದರು.

ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಸ್ವಾತಂತ್ರೃಕ್ಕೆ ಹೋರಾಡಿದ ಗಾಂಧೀಜಿಯನ್ನು ದ್ವೇಷ ಭಾವನೆಯಿಂದ ಕಾಣುವ, ಅವರ ಹತ್ಯೆಗೆ ಕಾರಣರಾದವರನ್ನು ಪೂಜ್ಯಭಾವನೆಯಿಂದ ಕಾಣುವವರೂ ಇದ್ದಾರೆ. ಗಾಂಧೀಜಿ ತತ್ವವನ್ನೇ ತುಳಿದು ರಾಜಕೀಯ ಮಾಡಲಾಗುತ್ತಿದೆ ಎಂದರು.

ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪ್ರಮುಖರಾದ ಪುಷ್ಪಲತಾ ಮೋಹನ್, ಎಸ್.ಎಸ್.ಕೀರ್ತಿರಾಜ, ಎಸ್.ಬಿ.ಅಶೋಕ ಕುಮಾರ್, ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ.ವಾಸುದೇವ ಇದ್ದರು. ಉಪನ್ಯಾಸಕಿ ಕೆ.ವಿ.ಜ್ಯೋತಿಕುಮಾರಿ ವಿಶೇಷ ಉಪನ್ಯಾಸ ನೀಡಿದರು. ಗಾಂಧಿ ಬಸಪ್ಪ ಕುಟುಂಬದವರು ಗಾಂಧಿ ಸ್ಮತಿ ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯ ವೈದ್ಯ ಎನ್.ಎಲ್.ನಾಯಕ್ ಅವರಿಗೆ ಪ್ರತಿಷ್ಠಾನದಿಂದ ವರ್ಷದ ವ್ಯಕ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net