

Weather update 18-08-2023: ಹಿಮಾಚಲ ಪ್ರದೇಶದಲ್ಲಿ ಮಳೆ-ಸಂಬಂಧಿತ ಘಟನೆಗಳಲ್ಲಿ ಸಾವಿನ ಸಂಖ್ಯೆ 74 ಕ್ಕೆ ಏರಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ 4-5 ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಿಕೆ ಪ್ರಕಟಿಸಿದೆ. ಇದು ಜನರನ್ನು ಮತ್ತಷ್ಟು ಆತಂಕಿತರನ್ನಾಗಿಸಿದೆ.
ಮಾನ್ಸೂನ್‌ನಲ್ಲಿ ಉಂಟಾದ ಭಾರೀ ಮಳೆ, ಪ್ರವಾಹ, ಭೂ ಕುಸಿತದಿಂದ ರಾಜ್ಯವು ಸಂಪೂರ್ಣವಾಗಿ ಜರ್ಜರಿತಗೊಂಡಿದ್ದು, ಜುಲೈ ಮತ್ತು ಈ ವಾರ ಸಂಭವಿಸಿದ ಎರಡು ವಿನಾಶಕಾರಿ ಪ್ರಾಕೃತಿಕ ವಿಕೋಪಗಳಲ್ಲಿ ಅಂದಾಜು ನಷ್ಟವು ಸುಮಾರು 10,000 ಕೋಟಿ ರೂಪಾಯಿ ಆಗಿದೆ.
ಹಾನಿಗೊಳಗಾದ ಮೂಲಸೌಕರ್ಯವನ್ನು ಪುನರ್ ನಿರ್ಮಿಸಲು ರಾಜ್ಯವು ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ದೇಶದ 22 ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದೆಹಲಿ-ಎನ್‌ಸಿಆರ್‌ನಲ್ಲಿ ಇಂದು ಆಕಾಶವು ಸಾಮಾನ್ಯವಾಗಿ ಮೋಡದಿಂದ ಕೂಡಿರುತ್ತದೆ ಮತ್ತು ಸಣ್ಣ ಮಳೆ ಅಥವಾ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸುಮಾರು 650 ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು 1,135 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 285 ನೀರು ಸರಬರಾಜು ಯೋಜನೆಗಳು ಅಸ್ತವ್ಯಸ್ತಗೊಂಡಿವೆ.ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದ್ದು, ಮನೆಗಳು ಕುಸಿದು ರಸ್ತೆಗಳು ಕೊಚ್ಚಿ ಹೋಗಿವೆ.