ಅಕ್ರಮ ಸಂಬಂಧ; ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಮಹಿಳೆ; ಇಬ್ಬರ ಬಂಧನ| Arrest

Ranchi murder
Published on

Arrest: ಜಾರ್ಖಾಂಡ್​ನ ರಾಂಚಿಯಲ್ಲಿ ಅಕ್ರಮ ಸಂಬಂಧ ಹಿನ್ನೆಲೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಗೈದಿದ್ದು, ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ(ಆಗಸ್ಟ್​ 23) ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ರಾಂಚಿ ಪೊಲೀಸರು, ಆಗಸ್ಟ್​ 21ರಂದು ರಾಂಚಿಯ ಪಿಥೋರಿಯಾ ಪ್ರದೇಶದಲ್ಲಿ ಲುಂಬಾ ಒರಾನ್ ಎಂಬ ವ್ಯಕ್ತಿ ಕೊಲೆಯಾಗಿತ್ತು. ಈ ಸಂಬಂಧ ಅವರ ಪತ್ನಿ ಗೀತಾ ಮತ್ತು ಆಕೆಯ ಪ್ರಿಯಕರ ಇರ್ಫಾನ್ ಅನ್ಸಾರಿಯನ್ನು ಬಂಧಿಸಲಾಗಿದೆ. ಕಳೆದ 8 ವರ್ಷಗಳಿಂದ ಗೀತಾ ಇರ್ಫಾನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಇದನ್ನು ಪತಿ ಲುಂಬಾ ವಿರೋಧಿಸುತ್ತಿದ್ದರು ಎಂದು ಹೇಳಿದ್ದಾರೆ.

ಆಗಸ್ಟ್ 20ರಂದು ಲುಂಬಾ ಕಾಂಕೆ ಅಗ್ರಿಕಲ್ಚರ್ ಗೇಟ್​ಗೆ ಬಂದಿದ್ದಾನೆ. ಅಲ್ಲಿಂದ ಇರ್ಫಾನ್ ಅವನನ್ನು ಕರೆದುಕೊಂಡು ಹೋಗಿ ಸಾಕಷ್ಟು ಮದ್ಯ ಕುಡಿಸಿದ್ದಾನೆ. ಅದರಲ್ಲಿ ನಿದ್ದೆ ಮಾತ್ರೆ ಬೆರಸಿದ್ದಾನೆ. ಪ್ರಜ್ಞೆ ತಪ್ಪಿದ ಬಳಿಕ ಕಾರಿನಲ್ಲಿ ಅವನ ಕತ್ತು ಹಿಸುಕಿ ಕೊಂದು ಶವವನ್ನು ಮೌವನಜರ-ಸಿಮಲ್ಪೇಡ್ ರಸ್ತೆ ಬಿಸಾಡಿದ್ದನು ಎಂದು ತಿಳಿಸಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಮೃತನ ಪತ್ನಿ ಇರ್ಫಾನ್ ಅನ್ಸಾರಿ ಜೊತೆ ವಾಸಿಸುತ್ತಿದ್ದರು. ಪತಿಯ ಚಲನವಲನಗಳನ್ನು ಸಿಸಿಟಿವಿ ಮೂಲಕ ಗಮನಿಸುತ್ತಿದ್ದರು ಎನ್ನಲಾಗಿದೆ. ಇಬ್ಬರನ್ನು ಬಂಧಿಸಿದ್ದು, ಒಂದು ಕಾರು, ಬೈಕ್, ಇಬ್ಬರ ಫೋನ್ ಹಾಗೂ ಸಿಮ್ ಕಾರ್ಡ್​ಗಳು, ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net