ಅಕ್ರಮ ಸಂಬಂಧ ಶಂಕೆ; ಪತ್ನಿ ಮತ್ತು ಆಕೆಯ ಸಹಚರನ ಮೇಲೆ ಹಲ್ಲೆಗೈದು, ರಸ್ತೆಯಲ್ಲಿ ಮೆರವಣಿಗೆ ಮಾಡಿದ ಉಪನ್ಯಾಸಕ| illicit relationship

Untitled design (2)
Published on

illicit relationship: ತನ್ನ 37 ವರ್ಷದ ಪತ್ನಿ ವಿವಾಹೇತರ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಶಿ, ಉಪನ್ಯಾಸಕನೊಬ್ಬ ಪತ್ನಿ ಮತ್ತು ಪತ್ನಿ ಜೊತೆಯಲ್ಲಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿ, ಇಬ್ಬರನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಿದ ಘಟನೆ ಒಡಿಶಾದ ಪುರಿಯಲ್ಲಿ ಶುಕ್ರವಾರ(ಸೆ.12) ವರದಿಯಾಗಿದೆ.

ಪುರಿ ಜಿಲ್ಲೆಯ ನಿಮಪಾದ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದ, ದೈಹಿಕವಾಗಿ ಹಲ್ಲೆ ನಡೆಸಿದ, ಬೀದಿಗಳಲ್ಲಿ ಮೆರವಣಿಗೆ ಮಾಡಿಸುವ ಮೂಲಕ ಸಾರ್ವಜನಿಕವಾಗಿ ಅವಮಾನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು 43 ವರ್ಷ ಉಪನ್ಯಾಸಕ ಮತ್ತು ಆತನ ಸಹಚರರನ್ನು ಬಂಧಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು,  ಆರೋಪಿ ಉಪನ್ಯಾಸಕ ಮಂಗಳವಾರ ತನ್ನ ಸ್ನೇಹಿತನೊಂದಿಗೆ ಕಳೆದ ಕೆಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ತನ್ನ ಪತ್ನಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.

ತನ್ನ ಪತ್ನಿ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಉಪನ್ಯಾಸಕ ಹೇಳಿದ್ದು, ಅದಕ್ಕಾಗಿ ಆಕೆಯ ಮೇಲೆ ಹಲ್ಲೆ ಮಾಡಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ, ಪತ್ನಿ ಮತ್ತು ಆಕೆಯ ಪುರುಷ ಸಹಚರ ಇಬ್ಬರೂ ಅಕ್ರಮ ಸಂಬಂಧದ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಅವಮಾನಿತ ಮಹಿಳೆ ತನ್ನ ಪತಿಯಿಂದ ದೂರವಾಗಿ 14 ವರ್ಷದ ಮಗ ನ ಜೊತೆಗೆ ನಿಮಪಾದ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿಳು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net