ಅಕ್ರಮ ಸಂಬಂಧ ಬಹಿರಂಗ: ಒಂದು ಆತ್ಮಹತ್ಯೆ, ಒಂದು ಕೊಲೆ!

death
ಸಾಂದರ್ಭಿಕ ಚಿತ್ರ
Published on

ಕೋಲಾರ: ಅಕ್ರಮ ಸಂಬಂಧದ ವಿಷಯ ಬಹಿರಂಗಪಡಿಸಿದ ವ್ಯಕ್ತಿಯನ್ನು ಬರ್ಬರ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೆಜಿಎಫ್ ತಾಲೂಕಿನ ಪೂವಗಾನಹಳ್ಳಿ ಗ್ರಾಮದ ನಿವಾಸಿ ನಾರಾಯಣಸ್ವಾಮಿ(52 ವರ್ಷ) ಕೊಲೆಯಾದ ವ್ಯಕ್ತಿ. ಅಭಿಷೇಕ್ ಕೊಲೆ ಆರೋಪಿ.

ಅಭಿಷೇಕ್​​ಗೆ ಗ್ರಾಮದ ಮಹಿಳೆಯೊಬ್ಬಳ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯವನ್ನು ಕಣ್ಣಾರೆ ಕಂಡಿದ್ದ ನಾರಾಯಣಸ್ವಾಮಿ, ಅವನಿಗೆ ಬುದ್ದಿವಾದ ಹೇಳಿದ್ದ, ಈ ವೇಳೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಳು. ಆ ಕಾರಣದಿಂದ ತಮ್ಮ ಅಕ್ರಮ ಸಂಬಂಧವನ್ನು ಬಹಿರಂಗ ಪಡಿಸಿದ ನಾರಾಯಣಸ್ವಾಮಿಯನ್ನು ಅಭಿಷೇಕ್​ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net