ಅಕ್ರಮ ಲೇಔಟ್‌ನಲ್ಲಿ ಮನೆ ಖರೀದಿಸಬೇಡಿ; ತಹಸೀಲ್ದಾರ್ ಸೂಚನೆ

Vijayavani-Featured-Image
Published on

ರಾಣೆಬೆನ್ನೂರ: ನಗರದಲ್ಲಿ ಅಕ್ರಮ ಲೇಔಟ್‌ಗಳ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ನಿವೇಶನ ಖರೀದಿಸುವ ಮುನ್ನ ಸರ್ಕಾರ ನಿಯಮಾವಳಿ ಪ್ರಕಾರ ಇದೆಯೋ, ಇಲ್ಲವೋ ಎಂದು ಎಚ್ಚರಿಕೆಯಿಂದ ತಿಳಿದುಕೊಂಡು ಮುಂದುವರಿಯಬೇಕು ಎಂದು ತಹಸೀಲ್ದಾರ್ ಆರ್.ಎಚ್. ಭಾಗವಾನ್ ತಿಳಿಸಿದರು.

ನಗರದ ತಾಪಂ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಲೇಔಟ್‌ಗಳಿಂದ ಬಹಳಷ್ಟು ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿದೆ. ಹೀಗಾಗಿ ಸಾರ್ವಜನಿಕರು ಖರೀದಿಸುವ ಮುನ್ನ ನಗರಸಭೆಯ ಉತಾರ, ನಗರ ಯೋಜನಾ ಪ್ರಾಽಕಾರದ ಪರವಾನಗಿ ಸೇರಿ ಅಗತ್ಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಎಂದರು.

ನಗರಸಭೆ ಆಯುಕ್ತ ಫಕ್ಕಿರಪ್ಪ ಇಂಗಳಗಿ, ತಾ.ಪಂ. ಇಒ ಸುಮಲತಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net