ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಮೂವರ ಬಂಧನ, 3 ನಾಡ ಬಂದೂಕು ವಶ

sep mpibc bdnsks
Published on

ಕೊಳ್ಳೇಗಾಲ: ಮಲೆ‌ ಮಹದೇಶ್ವರ ವನ್ಯಜೀವಿ ಧಾಮ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ತಾಲೂಕಿನ ಜಾಗೇರಿ ಗ್ರಾಮದಲ್ಲಿ ನಾಡಬಂದೂಕು ಹೊಂದಿದ್ದ ಮೂವರನ್ನು ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಜಾಗೇರಿಯ ಗೋವಿಂದರಾಜು (42), ಜಪಮಾಲೆ (48), ಸೇತುರಾಜ್ (42) ಬಂಧಿತ ಆರೋಪಿಗಳು. ಇವರಿಂದ 3 ನಾಡಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಮೂವರು ಆರೋಪಿಗಳು ಜಮೀನಿನಲ್ಲಿ ನಾಡಬಂದೂಕು ಅಡಗಿಸಿಟ್ಟು ರಾತ್ರಿ ವೇಳೆ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗ್ರಾಮಕ್ಕೆ ತೆರಳಿದ ಪೊಲೀಸರು ಆರೋಪಿಗಳ ಬಳಿ ನಾಡಬಂದೂಕು ಇರುವುದನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net