ಅಕ್ರಮ ವಿದ್ಯುತ್ ಸಂಪರ್ಕ ಸಲ್ಲ

5Huk2
Published on

ಹುಕ್ಕೇರಿ: ಸಮರ್ಪಕ ವಿದ್ಯುತ್ ಸಿಗುತ್ತಿಲ್ಲವೆಂದು ದೂರುವ ರೈತರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವವರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮಾಜಿ ಸಂಸದ, ವಿದ್ಯುತ್ ಸಹಕಾರಿ ಸಂಘದ ಮಾರ್ಗದರ್ಶಕ ರಮೇಶ ಕತ್ತಿ ಹೇಳಿದರು.

ತಾಲೂಕಿನ ಕಮತನೂರ ಗ್ರಾಮದ ಕುಲಕರ್ಣಿ ಅವರ ತೋಟದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವತಿಯಿಂದ ಸೋಮವಾರ ಅಳವಡಿಸಿದ ಹೊಸ 63 ಕೆವಿ ಟಿಸಿ (ವಿದ್ಯುತ್ ಪರಿವರ್ತಕ)ಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು ಕೃಷಿ ಚಟುವಟಿಕೆಗಳನ್ನು ನಿರ್ವಹಿಸಿಕೊಳ್ಳಬೇಕು.

ಇದರಿಂದಾಗಿ ಟಿಸಿ ಸಾಮರ್ಥ್ಯಕ್ಕೆ ಅನುಗುಣವಾಗಿ ಮತ್ತಷ್ಟು ಹೆಚ್ಚು ಹೊಸ ಟಿಸಿಗಳನ್ನು ಅಳವಡಿಸಲು ಸಾಧ್ಯವಾಗುತ್ತದೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕೊಳ್ಳಿ, ಪಿಕೆಪಿಎಸ್ ಅಧ್ಯಕ್ಷ ಕಲ್ಲಣ್ಣ ಚೌಗಲಾ, ನಿರ್ದೇಶಕ ಸುರೇಶ ಬೋರಗಲ್ಲಿ, ಗ್ರಾಪಂ ಸದಸ್ಯ ಗುರುನಾಥ ಹಿರೇಕೊಡಿ, ಮುಖಂಡರಾದ ಶ್ರೀಧರ ಕುಲಕರ್ಣಿ, ಸುಭಾಸ ಪಾಟೀಲ, ವಿನೋದ ಮುಗಳಿ, ವಿರೂಪಾಕ್ಷಿ ಚೌಗಲಾ, ಮಲ್ಲಪ್ಪ ಅಂಕಲಿ, ವಿದ್ಯುತ್ ಸಹಕಾರಿ ಸಂಘದ ಇಂಜಿನಿಯರ್ ನೇಮಿನಾಥ ಖೇಮಲಾಪುರೆ, ಶಾಖಾಧಿಕಾರಿ ಉದಯಕುಮಾರ ಮಗದುಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net