

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ವೈದ್ಯಕಿಯ ಸಿಬ್ಬಂದಿ ಉಪಯೋಗಿಸುವ ವೈಯಕ್ತಿಕ ಸಂರಕ್ಷಣಾ ಪರಿಕರಗಳನ್ನು (ಪಿಪಿಇ) ಸಂಸ್ಕರಿಸಲು (ಸ್ಟೆರಲೈಸ್) ಹಾಗೂ ವಸ್ತುಗಳ ಸಂಸ್ಕರಿತ ಸ್ಥಿತಿಗತಿಯನ್ನು ಕಾಯ್ದುಕೊಳ್ಳಲು ರೋಪಾರ್ ಐಐಟಿ ಸಂಶೋಧಕರ ತಂಡ ವಿಶೇಷ ಡಾಫಿಂಗ್ ಘಟಕವನ್ನು ವಿನ್ಯಾಸಗೊಳಿಸಿದ್ದಾರೆ.
ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ತಮ್ಮ ಕರ್ತವ್ಯದ ನಂತರ ವೈಯಕ್ತಿಕ ರಕ್ಷಣಾ ವಸ್ತುಗಳನ್ನು ತೆಗೆದು ಹಾಕುವ ಸ್ಥಳದಲ್ಲಿ ಘಟಕವನ್ನು ಸ್ಥಾಪಿಸಲು ವಿನ್ಯಾಸಗೊಳಿಸಲಾಗಿದೆ.
ರಾಸಾಯನಿಕ ಸೋಂಕು ನಿವಾರಕಗಳು, ಋಣಾತ್ಮಕ ಒತ್ತಡ ಕೊಠಡಿಗಳು ಹಾಗೂ ಯುವಿಜಿಐ ಎಂಬ ಮೂರು ಜರ್ಮಿಸೈಡಲ್ ತಂತ್ರಜ್ಞಾನದ ಬಳಕೆಯನ್ನು ಈ ಘಟಕ ಒಳಗೊಂಡಿರುತ್ತದೆ.
ಇದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಸುರಕ್ಷತಾ ಹಾಗೂ ಪರಿಣಾಮಕಾರಿ ಸೋಂಕು ನಿವಾರಕವನ್ನು ಬಳಸಿಕೊಂಡು ಸೋಂಕುಗಳೆತ ಸುರಂಗದೊಂದಿಗೆ ಆರಂಭವಾಗುತ್ತದೆ. ಇದು ಋಣಾತ್ಮಕ ಒತ್ತಡ ಚೌಕಟ್ಟನ್ನು ನಿರ್ವಹಿಸಲಿದ್ದು ಇದು ಗಾಳಿ ಇದ್ದರೂ ವೈರಸ್ ಹರಡುವಿಕೆಯ ಅಪಾಯವನ್ನು ಕಡಿಮೆಗೊಳಿಸುತ್ತದೆ.
ಕೋವಿಡ್ 19 ರೋಗಿಗಳನ್ನು ವೆಂಟಿಲೇಟರ್ ಇದ್ದ ಕಡೆ ಸ್ಥಳಾಂತರಿಸುವುದು, ಮಾದರಿ ಸಂಗ್ರಹಣೆ ಹಾಗೂ ನಿರ್ವಹಣೆಯಂತಹ ಅಪಾಯಕಾರಿ ಚಟುವಟಿಕೆಗಳನ್ನು ನಡೆಸುವ ವೈದ್ಯಕಿಯ ಸಿಬ್ಬಂದಿ, ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಮುಖಗವಸು, ಕೈಗವಸುಗಳಂತಹ ವೈಯಕ್ತಿಕ ರಕ್ಷಣಾ ಪರಿಕರಗಳು ವೈದ್ಯರು ಹಾಗೂ ವೈದ್ಯಕಿಯ ಸಿಬ್ಬಂದಿ ರಕ್ಷಣೆಗೆ ಸಹಾಯವಾಗುತ್ತವೆ.
ಇವುಗಳನ್ನು ನಿದಿರ್ಷ್ಟ ಸ್ಥಳದಲ್ಲಿ ತೆಗೆಯಬೇಕು ಮತ್ತು ಇಡಬೇಕು. ಆರೋಗ್ಯ ಕಾರ್ಯಕರ್ತರು ತಮ್ಮ ಪಿಪಿಇ ಧರಿಸುವಲ್ಲಿ ಅಥವಾ ತೆಗೆದುಹಾಕುವಲ್ಲಿ ಆಕಸ್ಮಿಕವಾಗಿ ತಪ್ಪು ಮಾಡುತ್ತಾರೆ ಎಂಬ ಬಗ್ಗೆ ವರದಿಯಾಗಿದೆ. ಇದು ರೋಗಕಾರಕಗಳಿಗೆ ಒಡ್ಡಿಕೊಳ್ಳಬಹುದು. ಡೋಫಿಂಗ್ ಕೇಂದ್ರದಲ್ಲಿ ಸಂಸ್ಕರಣೆ ಹಾಗೂ ವಸ್ತುಗಳ ಸಂಸ್ಕರಿತ ಸ್ಥಿತಿಗತಿ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಮೆಟಲರ್ಜಿಕಲ್ ಆ್ಯಂಡ್ ಮಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಖುಷಬೂ ರಖಾ ತಿಳಿಸಿದ್ದಾರೆ.
ನಿಗದಿತ ವಿಧಾನದಿಂದ ಪಿಪಿಇ ತೆಗೆದ ನಂತರ ವೈದ್ಯಕಿಯ ಸಿಬ್ಬಂದಿ ಎರಡು ಗಾಳಿಕೊಡೆಗಳ ಪೈಕಿ ಒಂದರಲ್ಲಿ ಪಿಪಿಇಯನ್ನು ಹಾಕಬೇಕು. ಸೋಂಕುಗಳೆತಕ್ಕಾಗಿ ಎರಡೂ ಗಾಳಿಕೊಡೆಗಳನ್ನು ಯುವಿಸಿ ಜರ್ಮಿಸೈಡಲ್ ಟ್ಯೂಬ್ಗಳೊಂದಿಗೆ ಜೋಡಿಸಲಾಗಿರುತ್ತದೆ. ಪ್ರತಿ ಡೋಫಿಂಗ್ ಅವಧಿ ಮುಗಿದ ನಂತರ ಅಥವಾ ಪರ್ಯಾಯವಾಗಿ 2&3 ಗಂಟೆಗೊಮ್ಮೆ ಕೊಠಡಿಯನ್ನು ಸೋಂಕುರಹಿತಗೊಳಿಸಲು ಯುವಿಸಿ ಮಾದರಿಯ ಜೆರ್ಮಿಸೈಡಲ್ ಟ್ಯೂಬ್ಗಳು ಅಥವಾ ಬಲ್ಬ್ಗಳನ್ನು ಆ ಜಾಗದಲ್ಲಿ ಸ್ಥಾಪಿಸಲಾಗುತ್ತದೆ. ಡೋಫಿಂಗ್ ವಿಧಾನಕ್ಕೆ ಸೂಕ್ತ ತರಬೇತಿ ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)