ಆತ್ಮಹತ್ಯೆಗೆ ಶರಣಾದ ಐಐಟಿ ಆಕಾಂಕ್ಷಿ; ಈ ವರ್ಷದ 4ನೇ ಪ್ರಕರಣವಿದು!

Untitled design (86)
Published on

ರಾಜಸ್ಥಾನ: ಐಐಟಿ-ಜೆಇಇ ಆಕಾಂಕ್ಷಿಯಾಗಿದ್ದ ವಿದ್ಯಾರ್ಥಿ ಇಂದು ಬೆಳಗ್ಗೆ ತಮ್ಮ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಘಟನೆ ತಿಳಿದ ಸುತ್ತಮುತ್ತಲಿನವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇಶಾದ್ಯಂತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಬರುವ ಶಿಕ್ಷಣ ಕೇಂದ್ರದಲ್ಲಿ ಇಂತಹ ಘಟನೆಗಳನ್ನು ಮರುಕುಳಿಸುತ್ತಿರುವುದು ಸದ್ಯ ಭಾರೀ ಆಶ್ಚರ್ಯವನ್ನು ಉಂಟುಮಾಡಿದೆ.

ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನ ಶವಪತ್ತೆಯಾಗಿದ್ದು, ಈ ವರ್ಷದಲ್ಲಿ ಇದು ನಾಲ್ಕನೇ ಆತ್ಮಹತ್ಯೆ ಎಂದು ವರದಿ ಉಲ್ಲೇಖಿಸಿದೆ. ಜಾರ್ಖಂಡ್‌ನ ನಿವಾಸಿಯಾದ ಶುಭ್ ಚೌಧರಿ, ಪ್ರಧಾನ ಐಐಟಿ ಸೇರಿದಂತೆ ದೇಶದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅಗತ್ಯವಿರುವ ಜೆಇಇ-ಮೇನ್ಸ್‌ಗೆ ತಯಾರಿ ನಡೆಸುತ್ತಿದ್ದರು ಎಂದು ಹೇಳಲಾಗಿದೆ.

ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿದ್ದರು. ನಿನ್ನೆ ಜೆಇಇ ಮೇನ್ಸ್ ಫಲಿತಾಂಶಗಳು ಪ್ರಕಟವಾದಾಗ, ಶುಭ್ ತಾವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದನ್ನು ಗಮನಿಸಿದ ನಂತರ ಅತೀವ ಬೇಸರದಿಂದ ತಮ್ಮ ಹಾಸ್ಟೆಲ್ ಕೋಣೆಗೆ ಹಿಂತಿರುಗಿದ್ದರು. ಆದ್ರೆ, ಇಂದು ಅವರ ಶವ ಸೀಲಿಂಗ್‌ ಫ್ಯಾನ್​ನಲ್ಲಿರುವುದು ಪತ್ತೆಯಾಗಿದೆ.

ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್​ನೋಟ್​ ಅಥವಾ ಇನ್ನಾವುದೇ ಸುಳಿವಿಗಾಗಿ ಮೃತ ಯುವಕನ ಕೊಠಡಿಯನ್ನು ಶೋಧಿಸುತ್ತಿದ್ದಾರೆ. ಘಟನೆ ಬಗ್ಗೆ ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಕುಟಂಬಸ್ಥರು ಸ್ಥಳಕ್ಕೆ ಆಗಮಿಸಿದ ನಂತರವೇ ಶವಪರೀಕ್ಷೆ ನಡೆಸಲಾಗುವುದು ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net