

ಬೆಂಗಳೂರು: ವಿಶ್ವದ ಟಾಪ್ ಸಂಶೋಧನಾ ವಿವಿಯಲ್ಲಿ ಬೆಂಗಳೂರಿನ ಐಐಎಸ್ಸಿ ನಂಬರ್ 1 ಸ್ಥಾನ ಪಡೆದುಕೊಂಡಿದೆ.
2022ರ ಉನ್ನತ 200 ವಿಶ್ವವಿದ್ಯಾಲಯಗಳ ಪಟ್ಟಿ ಪ್ರಕಟವಾಗಿದ್ದು, ಸಂಶೋಧನೆಗೆ ಸಂಬಂಧಿಸಿದ ಪಟ್ಟಿಯಲ್ಲಿ ಐಐಎಸ್ಸಿಗೆ ನಂಬರ್ 1 ಪಟ್ಟ ದೊರಕಿದೆ. ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ನಿಂದ ಜಾಗತಿಕ ಅಂತಾರಾಷ್ಟ್ರೀಯ ಶ್ರೇಯಾಂಕಗಳ ಪಟ್ಟಿ ಬಿಡುಗಡೆಯಾಗಿದೆ.
ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ. ಇದು ತನ್ನ 18 ನೇ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಿದ್ದು, ಭಾರತದ ಮೂರು ವಿಶ್ವವಿದ್ಯಾಲಯಗಳು ಕ್ಯೂ.ಎಸ್. ವಿಶ್ವವಿದ್ಯಾಲಯ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಐ.ಐ.ಟಿ. ಬಾಂಬೆ 177 ಹಾಗೂ ಐ.ಐ.ಟಿ. ದಿಲ್ಲಿ 185 ನೇ ಸ್ಥಾನ ಪಡೆದಿದೆ. ಐ.ಐ.ಎಸ್.ಸಿ ಬೆಂಗಳೂರು ವಿಶ್ವವಿದ್ಯಾಲಯಗಳ ಶ್ರೇಯಾಂಕಗಳಲ್ಲಿ 186 ನೇ ಸ್ಥಾನ ಪಡೆದಿದೆ. ಆದರೆ, ಸಂಶೋಧನೆ ವಿಭಾಗದಲ್ಲಿ ಐಐಎಸ್ಸಿ ಬೆಂಗಳೂರು ವಿಶ್ವದಲ್ಲೇ ನಂಬರ್ 1 ರ್ಯಾಂಕ್ ಪಡೆದಿದೆ. ಭಾರತದ ವಿಶ್ವ ವಿದ್ಯಾನಿಲಯಗಳ ಸಾಧನೆಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪ್ರೋಖ್ರಿಯಾಲ್ ಅಭಿನಂದನೆ ಸಲ್ಲಿಸಿದ್ದಾರೆ.