

ನವದೆಹಲಿ: ಭಾರತದಲ್ಲಿ ಕರೊನಾ ಆರ್ಭಟ ಇದೇ ರೀತಿ ಮುಂದುವರಿದರೆ ಸೆಪ್ಟೆಂಬರ್ ವೇಳೆಗೆ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ 35 ಲಕ್ಷಕ್ಕೂ ಅಧಿಕವಾಗಲಿದೆ. ಅದರಲ್ಲಿ 10 ಲಕ್ಷ ಸಕ್ರಿಯ ಪ್ರಕರಣಗಳಿರಲಿವೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಆ ವೇಳೆಗೆ 2.10 ಲಕ್ಷ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದ್ದು, 71,300 ಸಕ್ರಿಯ ಕೇಸ್ಗಳಿರಲಿವೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ತಂಡದ ಅಧ್ಯಯನ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ ವೇಳೆಗೆ 6.30 ಲಕ್ಷ ಕೇಸ್ಗಳು ವರದಿಯಾಗಲಿದ್ದು, 1.40 ಲಕ್ಷ ಸಾವು ಸಂಭವಿಸುವ ಸಾಧ್ಯತೆ ಇದೆ. ಈ ರಾಜ್ಯದಲ್ಲಿ 25 ಸಾವಿರ ಮಂದಿ ಅಸುನೀಗುವ ಸಂಭವ ಇದೆ ಎಂದು ಅಧ್ಯಯನ ತಿಳಿಸಿದೆ. ಸೆಪ್ಟೆಂಬರ್ ಬಳಿಕವೂ ಕರೊನಾ ನಿಯಂತ್ರಣಕ್ಕೆ ಬಾರದಿದ್ದಲ್ಲಿ ನವೆಂಬರ್ 1ರ ವೇಳೆಗೆ 1.20 ಕೋಟಿ ಸೋಂಕು ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ. ಆ ವೇಳೆಗೆ ಸುಮಾರು 5 ಲಕ್ಷ ಮಂದಿ ಕರೊನಾಗೆ ಬಲಿಯಾಗಲಿದ್ದಾರೆ. ಕರ್ನಾಟಕದಲ್ಲಿ 7.20 ಲಕ್ಷ ಪ್ರಕರಣಗಳು ವರದಿಯಾಗಲಿದೆ. ನಂತರ ಮುಂದಿನ ವರ್ಷ ಜನವರಿ 1ರ ವೇಳೆಗೆ 2.90 ಕೋಟಿ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನಕಾರರು ಅಂದಾಜಿಸಿದ್ದಾರೆ.
ಕರೊನಾಗೆ 99 ವೈದ್ಯರು ಬಲಿ
ಕರೊನಾ ಮಹಾಮಾರಿ ವಿರುದ್ಧ ಕಳೆದ 6 ತಿಂಗಳಿನಿಂದ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಿರುವ ವೈದ್ಯರಲ್ಲಿ 99 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ, ಇದರಲ್ಲಿ ಬಹುತೇಕರು ಸಾಮಾನ್ಯ ವೈದ್ಯರು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ.
24 ತಾಸಿನಲ್ಲಿ 3.20 ಲಕ್ಷ ಸ್ಯಾಂಪಲ್ ಪರೀಕ್ಷೆ
ದೇಶದಲ್ಲಿ ಮಂಗಳವಾರ ಒಟ್ಟು 3.20 ಲಕ್ಷ ಮಾದರಿಗಳ (ಸ್ಯಾಂಪಲ್) ಪರೀಕ್ಷೆ ನಡೆಸಲಾಗಿದ್ದು, ಇದು ಒಂದೇ ದಿನ ನಡೆಸಿದ ಅತಿ ಹೆಚ್ಚು ಪರೀಕ್ಷೆ ಇದಾಗಿವೆ. ಈವರೆಗೆ ಒಟ್ಟು 1.24 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆಯ ಸಂಖ್ಯೆಯನ್ನು ದಿನಕ್ಕೆ 10 ಲಕ್ಷಕ್ಕೆ ಏರಿಸಲಾಗುವುದು ಎಂದೂ ಹೇಳಿದೆ.
ಭಾರತೀಯನ -ಠಿ; 1.52 ಕೋಟಿ ಬಿಲ್ ಮನ್ನಾ
ದುಬೈನ ಆಸ್ಪತ್ರೆಯೊಂದು ಭಾರತೀಯ ಮೂಲದ ಕರೊನಾ ಸೋಂಕಿತನ ಚಿಕಿತ್ಸೆಯ -ಠಿ; 1.52 ಕೋಟಿ ಬಿಲ್ ಅನ್ನು ಮಾನವೀಯ ಆಧಾರದ ಮೇಲೆ ಮನ್ನಾ ಮಾಡಿದೆ. ಜತೆಗೆ ಆತನಿಗೆ -ಠಿ; 10 ಸಾವಿರ ನೀಡಿ, ವಿಮಾನಕ್ಕೆ ಉಚಿತ ಟಿಕೆಟ್ ವ್ಯವಸ್ಥೆ ಮಾಡಿ ಭಾರತಕ್ಕೆ ಕಳುಹಿಸಿಕೊಟ್ಟಿದೆ. ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ವೇಣುಗುಮಾಟ್ಲಾ ಗ್ರಾಮದ 42 ವರ್ಷದ ರಾಜೇಶ್ ಲಿಂಗಯ್ಯ ಒಡ್ನಾಲಾ ಎಂಬುವವರು ಎರಡು ವರ್ಷಗಳಿಂದ ದುಬೈನಲ್ಲಿ ಕಟ್ಟಡ ನಿರ್ಮಾಣ ಕಾರ್ವಿುಕರಾಗಿ ಕೆಲಸ ಮಾಡುತ್ತಿದ್ದರು. ಕೋವಿಡ್ ಸೋಂಕು ದೃಢಪಟ್ಟ ಕಾರಣ ಸತತ 80 ದಿನಗಳ ಚಿಕಿತ್ಸೆಯ ನಂತರ ರಾಜೇಶ್ ಗುಣಮುಖರಾಗಿದ್ದರು. ಆಸ್ಪತ್ರೆಯ ಒಟ್ಟು ಬಿಲ್ 7,62,555 ದಿರ್ಹಾಮ್ (-ಠಿ; 1.52 ಕೋಟಿ ರೂ.) ಆಗಿತ್ತು.
ಗುಪ್ತವಾಗಿದೆ ಸೋಂಕು ಪ್ರಸರಣ
ಏಷ್ಯಾದ ಹಲವು ದೇಶಗಳಲ್ಲಿ ಸೋಂಕು ಪಸರಿಸುವಿಕೆ ಗುಪ್ತವಾಗಿದ್ದು, ಪ್ರಕರಣಗಳ ಮೂಲವೇ ಪತ್ತೆಯಾಗುತ್ತಿಲ್ಲ ಎಂದು ವರದಿಯೊಂದು ತಿಳಿಸಿದೆ. ಹೀಗಾಗಿ ಅಲ್ಲಿ ಮತ್ತೆ ಲಾಕ್ಡೌನ್ ಪರಿಸ್ಥಿತಿ ಉದ್ಭವಿಸಬಹುದು ಎಂದು ತಿಳಿಸಲಾಗಿದೆ.