

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ನಿಮಗೆ ಕಾಂಟ್ಯಾಕ್ಟ್ಸ್ ಚೆನ್ನಾಗಿದ್ದರೆ ಈ ಬಿಸಿನೆಸ್ ಮಾಡಿ
ಒಂದು ಸಣ್ಣ ಹುಟ್ಟುಹಬ್ಬದಿಂದ ಹಿಡಿದು, ದೊಡ್ಡ ಕಾನ್ಸರ್ಟ್ ಆಯೋಜಿಸುವುದರವರೆಗೆ ಎಲ್ಲದಕ್ಕೂ ಇವೆಂಟ್ ಮ್ಯಾನೇಜ್ವುಂಟ್ ಕಂಪನಿಯ ಅವಶ್ಯಕತೆ ಇದೆ. ಇಲ್ಲಿ ಹೂಡಿಕೆ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ಕಾಂಟ್ಯಾಕ್ಟ್ಗಳು ಮುಖ್ಯ. ಯಾರಿಗೆ ನೆಟ್ವರ್ಕ್ ಚೆನ್ನಾಗಿರುತ್ತದೋ, ಅವರು ಸುಲಭವಾಗಿ ಈ ರಂಗದಲ್ಲಿ ತೊಡಗಿಸಿಕೊಂಡು ಲಾಭ ಗಳಿಸಬಹುದು. ನಿಮ್ಮ ಬಳಗ ದೊಡ್ಡದಿದ್ದಷ್ಟೂ ನಿಮಗೆ ಅನುಕೂಲ. ದೊಡ್ಡ ಇವೆಂಟ್ ಮಾಡಬೇಕು ಅಂತಲೇ ಏನೂ ಇಲ್ಲ. ಹುಟ್ಟುಹಬ್ಬಗಳು, ಮನೆ ಪಾರ್ಟಿಗಳು, ಫ್ಯಾಶನ್ ಶೋಗಳನ್ನು ಕೂಡ ಅಚ್ಚುಕಟ್ಟಾಗಿ ಆಯೋಜಿಸಿ ದುಡ್ಡು ಮಾಡಬಹುದು. ಕೆಲಸ ಚೆನ್ನಾಗಿದ್ದರೆ, ಅದು ನಾಲ್ಕು ಜನರಿಗೆ ಇಷ್ಟವಾದರೆ, ಅದೇ ಜಾಹೀರಾತು. ಒಬ್ಬರಿಂದ ಮತ್ತೊಬ್ಬರಿಗೆ ಪ್ರಚಾರವಾಗುತ್ತ ಹೋಗುತ್ತದೆ. ಕ್ರಮೇಣ ಬೆಳೆಯುತ್ತಾ ಹೋಗಬಹುದು. ಈಗ ಕೋವಿಡ್ನಿಂದ ದೊಡ್ಡದೊಡ್ಡ ಪಾರ್ಟಿಗಳು, ಇವೆಂಟ್ಗಳೆಲ್ಲಾ ಕಡಿಮೆಯಾಗಿವೆ. ಹೌಸ್ಪಾರ್ಟಿಗಳು ಜಾಸ್ತಿಯಾಗಿವೆ. ಮೊದಲೆಲ್ಲಾ ಹೊರಗೆ ಗೆಟ್ಟುಗೆದರ್ ಮಾಡುತ್ತಿದ್ದವರು ಈಗ ಮನೆಯಲ್ಲೇ ಸಣ್ಣ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಸುಮ್ಮನೆ 10 ಜನ ಒಂದು ಮನೆಯಲ್ಲಿ ಸೇರುತ್ತಿದ್ದಾರೆ ಎಂದರೆ ಅವರಿಗೆ ಬೇಕಾಗುವ ಆಹಾರ, ಮನರಂಜನೆ ವ್ಯವಸ್ಥೆ ಮಾಡುವ ಕೆಲಸವನ್ನು ಇವೆಂಟ್ ಮ್ಯಾನೇಜ್ವೆುಂಟ್ನವರು ಮಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಬಹಳ ಬೇಡಿಕೆ ಇದ್ದು, ಯಾರೋ ಒಬ್ಬರು ಇದನ್ನೆಲ್ಲಾ ಚೆನ್ನಾಗಿ ನಿರ್ವಹಿಸುತ್ತಾರೆ ಎಂದರೆ ಅವರಿಗೆ ಬಹಳ ಬೇಡಿಕೆ ಇದೆ. ಸ್ವಲ್ಪ ಜಾಸ್ತಿ ಖರ್ಚಾದರೂ ಪರ್ವಾಗಿಲ್ಲ, ಇವೆಂಟ್ ಚೆನ್ನಾಗಿ ಮುಗಿದರೆ ಅಷ್ಟೇ ಸಾಕು ಎನ್ನುವ ಹಲವು ಜನ ಇರುವುದರಿಂದ ಕೈತುಂಬ ಕಾಸು ಮಾಡಲು ಈ ಕ್ಷೇತ್ರ ಹೇಳಿ ಮಾಡಿಸಿದ್ದು.
| ಪನ್ನಗಾಭರಣ ಚಲನಚಿತ್ರ ನಿರ್ದೇಶಕ ಮತ್ತು ಆಂಡ್ ಜಸ್ಟ್ ಜಾಝå್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ